ಹಾಕಿ ಟೂರ್ನಿ: ರೇಂಜರ್ಸ್– ಓಂ ಸಾಯಿ ಪಂದ್ಯ ಡ್ರಾ ಬೆಂಗಳೂರು: ರೇಂಜರ್ಸ್ ಮತ್ತು ಓಂ ಸಾಯಿ ಕ್ಲಬ್, ಧಾರವಾಡ ತಂಡಗಳ ನಡುವೆ ಇಲ್ಲಿ ನಡೆದ ರಾಜ್ಯ ಎ ಡಿವಿಷನ್‌ ಹಾಕಿ ಟೂರ್ನಿಯ ಪಂದ್ಯವು 3-3ರ ಗೋಲುಗಳ ಡ್ರಾನಲ್ಲಿ ಅಂತ್ಯವಾಯಿತು. ಸೋಮವಾರ ನಡೆದ ಪಂದ್ಯದಲ್ಲಿ ರೇಂಜರ್ಸ್ ಹಾಕಿ ಕ್ಲಬ್ ಪರ ಸುರೇಶ್‌ (9 ಮತ್ತು 22ನೇ ನಿಮಿಷ) ಎರಡು ಗೋಲು ದಾಖಲಿಸಿದರು. ಧರ್ಮೇಂದ್ರ (7ನೇ ನಿಮಿಷ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಓಂ ಸಾಯಿ ತಂಡಕ್ಕಾಗಿ ಅರುಣ್‌ (12, 46ನೇ ನಿಮಿಷ) ಎರಡು ಗೋಲು ಗಳಿಸಿ ದರು. ಪುರುಷೋತ್ತಮ್‌ (35ನೇ ನಿ.) ಒಂದು ಗೋಲು ಹೊಡೆದರು. ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಆರ್‌ಬಿಐ– ಯಂಗ್‌ಸ್ಟಾರ್‌, ರೈಸಿಂಗ್ ಸ್ಟಾರ್ – ಬ್ಲ್ಯೂ ಆ್ಯಂಡ್‌ ವೈಟ್‌ ಹಾಕಿ ಕ್ಲಬ್‌ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.