ಹಾಕಿ: ಅಂಕಿತ್ ಹ್ಯಾಟ್ರಿಕ್‌ ಗೋಲು ಬೆಂಗಳೂರು: ಅಂಕಿತ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಯಂಗ್‌ಸ್ಟಾರ್ ಕ್ಲಬ್, ರಾಯಚೂರು ತಂಡವು ಕೆಎಸ್‌ಎಚ್‌ಎ ರಾಜ್ಯ ಎ ಡಿವಿಷನ್ ಹಾಕಿ ಟೂರ್ನಿಯಲ್ಲಿ ಜಯ ಗಳಿಸಿತು. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಯಂಗ್‌ಸ್ಟಾರ್‌, ರಾಯಚೂರು 4-1ರಿಂದ ಬ್ಲ್ಯೂ ಆ್ಯಂಡ್‌ ವೈಟ್‌ ಕ್ಲಬ್ ವಿರುದ್ಧ ಗೆದ್ದಿತು. ಅಂಕಿತ್‌ ಅವರು 28, 35 ಮತ್ತು 48ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಮೊಹಮ್ಮದ್ ತಾಲಿಬ್‌ (50ನೇ ನಿ.) ವಿಜೇತ ತಂಡಕ್ಕಾಗಿ ಒಂದು ಗೋಲು ಹೊಡೆದರು. ಬ್ಲ್ಯೂ ಆ್ಯಂಡ್‌ ವೈಟ್‌ ಕ್ಲಬ್‌ ತಂಡದ ಪರ ಅಜಯ್ ಅವರು 10ನೇ ನಿಮಿಷ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.