ಸಬ್ ಜೂನಿಯರ್, ಜೂನಿಯರ್ ಡೈವಿಂಗ್ ಚಾಂಪಿಯನ್‌ಷಿಪ್‌: ಆರ್ಯನ್‌ಗೆ ಮತ್ತೆ ಡಬಲ್‌ ಚಿನ್ನ ಬೆಂಗಳೂರು: ಡಾಲ್ಫಿನ್ ಅಕ್ವಾಟಿಕ್ಸ್‌ನ ಆರ್ಯನ್‌ ಮೋಸೆಸ್ ವ್ಯಾಸ್ ಶುಕ್ರವಾರ ಎನ್‌ಜೆಆರ್ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಡೈವಿಂಗ್ ಚಾಂಪಿಯನ್‌ಷಿಪ್‌ನ ಗುಂಪು 1ರ ಬಾಲಕರ ಮೂರು ಮೀಟರ್‌ ಸ್ಪ್ರಿಂಗ್‌ಬೋರ್ಡ್ ಹಾಗೂ ಗುಂಪು 1ರ ಬಾಲಕರ ಹೈಬೋರ್ಡ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಹಲಸೂರು ಕೆನ್ಸಿಂಗ್ಟನ್ ಈಜುಕೊಳದಲ್ಲಿ ಗುರುವಾರ ಆರಂಭಗೊಂಡ ಎರಡು ದಿನಗಳ ಚಾಂಪಿಯನ್‌ಷಿಪ್‌ನ ಮೊದಲ ದಿನವೂ ಆರಿನ್ ಮೋಸೆಸ್ ವ್ಯಾಸ್ ಗ್ರೂಪ್ 1ರ ಒಂದು ಮೀ. ಸ್ಪ್ರಿಂಗ್‌ಬೋರ್ಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಬಾಲಕರ ಮೂರು ಮೀಟರ್‌ ಸ್ಪ್ರಿಂಗ್‌ಬೋರ್ಡ್‌ನ ಗುಂಪು 2 ಮತ್ತು 3ರಲ್ಲಿ ಕ್ರಮವಾಗಿ ಎಸ್. ಸೋಹನ್ ಸೂರಿ ಮತ್ತು ಟಿ. ಸ್ಕಂದನ್ ಪ್ರಸಾದ್; ಬಾಲಕಿಯರ ವಿಭಾಗದ ಗುಂಪು 2 ಮತ್ತು 3ರಲ್ಲಿ ಕ್ರಮವಾಗಿ ಚೈತ್ರಾ ಎಸ್. ಪ್ರಸಾದ್ ಮತ್ತು ಹರಿಣಿ ಪ್ರದೀಪ್‌ ಚಿನ್ನದ ಪದಕ ಗೆದ್ದರು. ಬಾಲಕರ ಹೈಬೋರ್ಡ್‌ನ ಗುಂಪು 2 ಮತ್ತು 3ರಲ್ಲಿ ಕ್ರಮವಾಗಿ ಎಸ್‌.ಸೋಹನ್‌ ಸೂರಿ ಮತ್ತು ಯುವರಾಜ್ ಸಂತೋಷ್ ಮೋಹನ್‌ಗೇಕರ್; ಬಾಲಕಿಯರ ಗ್ರೂಪ್‌ 2ರಲ್ಲಿ ಪೂರ್ವಿಕಾ ವೆಂಕಟೇಶ್‌ ಪ್ರಶಸ್ತಿ ಪಡೆದರು. ಫಲಿತಾಂಶ: 3 ಮೀ. ಸ್ಪ್ರಿಂಗ್ ಬೋರ್ಡ್ (ಬಾಲಕರು) ಗುಂಪು 1: ಆರ್ಯನ್‌ ಮೋಸೆಸ್ ವ್ಯಾಸ್ (284.10 ಪಾಯಿಂಟ್ಸ್‌, ಡಾಲ್ಫಿನ್ ಅಕ್ವಾಟಿಕ್ಸ್)–1 ಗುಂಪು 2: ಎಸ್. ಸೋಹನ್ ಸೂರಿ (258.95 ಪಾ., ಡಾಲ್ಫಿನ್ ಅಕ್ವಾಟಿಕ್ಸ್)–1, ಅರ್ಣವ್ ಎ. ಕುಲಕರ್ಣಿ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್)–2 ಗುಂಪು 3: ಟಿ. ಸ್ಕಂದನ್ ಪ್ರಸಾದ್ (184.35 ಪಾ., ಡಾಲ್ಫಿನ್ ಅಕ್ವಾಟಿಕ್ಸ್)–1, ಯುವರಾಜ್ ಸಂತೋಷ್ ಮೋಹನ್‌ಗೇಕರ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್)–2 2 3 ಮೀ. ಸ್ಪ್ರಿಂಗ್ ಬೋರ್ಡ್ (ಬಾಲಕಿಯರು) ಗುಂಪು 2: ಚೈತ್ರಾ ಎಸ್. ಪ್ರಸಾದ್ (253.95 ಪಾ.), ಪೂರ್ವಿಕಾ ವೆಂಕಟೇಶ್– 2, ಪಿ.ನಯನಾ –3 (ಮೂವರು ಡಾಲ್ಫಿನ್ ಅಕ್ವಾಟಿಕ್ಸ್) ಗುಂಪು 3: ಹರಿಣಿ ಪ್ರದೀಪ್‌ (123.50 ಪಾ., ಡಾಲ್ಫಿನ್ ಅಕ್ವಾಟಿಕ್ಸ್)– 1 ಹೈಬೋರ್ಡ್‌ (ಬಾಲಕರು) ಗುಂಪು 1: ಆರ್ಯನ್‌ ಮೋಸೆಸ್ ವ್ಯಾಸ್ (284.80 ಪಾ., ಡಾಲ್ಫಿನ್ ಅಕ್ವಾಟಿಕ್ಸ್)–1 ಗುಂಪು 2: ಎಸ್‌.ಸೋಹನ್‌ ಸೂರಿ (241.75 ಪಾ., ಡಾಲ್ಫಿನ್ ಅಕ್ವಾಟಿಕ್ಸ್)–1, ಅರ್ಣವ್‌ ಎ.ಕುಲಕರ್ಣಿ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್)–2 ಗುಂಪು 3: ಯುವರಾಜ್ ಸಂತೋಷ್ ಮೋಹನ್‌ಗೇಕರ್ (88.10 ಪಾ.)–1 ಬಾಲಕಿಯರು: ಗುಂಪು 2: ಪೂರ್ವಿಕಾ ವೆಂಕಟೇಶ್‌ (188.85 ಪಾ., ಡಾಲ್ಫಿನ್ ಅಕ್ವಾಟಿಕ್ಸ್)–1 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.