ಕೆಎಸ್‌ಎಚ್‌ಎ ‘ಎ’ ಡಿವಿಷನ್‌ ಹಾಕಿ ಲೀಗ್‌: ಯಂಗ್‌ಸ್ಟಾರ್‌ಗೆ ಜಯ ಬೆಂಗಳೂರು: ರಾಯಚೂರಿನ ಯಂಗ್‌ ಸ್ಟಾರ್‌ ಹಾಕಿ ಕ್ಲಬ್‌ ತಂಡದವರು ಕೆಎಸ್‌ಎಚ್‌ಎ ‘ಎ’ ಡಿವಿಷನ್‌ ಹಾಕಿ ಲೀಗ್‌ನಲ್ಲಿ ಗೆಲುವು ಪಡೆದರು. ಮಂಗಳವಾರ ನಡೆದ ಪಂದ್ಯದಲ್ಲಿ ಯಂಗ್‌ ಸ್ಟಾರ್‌ ತಂಡ 5–2 ಗೋಲುಗಳಿಂದ ಧಾರವಾಡದ ಓಂ ಸಾಯಿ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು. ಶ್ರೀಕಾಂತ್‌ (33), ತಾಲಿಬ್‌ (35), ಬಾಬು (39), ವಿನಯ್‌ (42) ಮತ್ತು ಅಂಕಿತ್‌ (6) ಅವರು ವಿಜಯಿ ತಂಡದ ಪರ ಗೋಲು ಗಳಿಸಿದರು. ಓಂ ಸಾಯಿ ತಂಡಕ್ಕೆ ಮನು (17) ಮತ್ತು ಸಬ್ರಿತ್‌ (31) ಅವರು ಚೆಂಡನ್ನು ಗುರಿ ಸೇರಿಸಿದರು. ಬುಧವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಯುನೈಟೆಡ್‌ ಹಾಕಿ ಕ್ಲಬ್‌– ಯಂಗ್‌ ಸ್ಟಾರ್‌ ಹಾಕಿ ಕ್ಲಬ್‌ ಹಾಗೂ ಗುರು ಹಾಕಿ ಕ್ಲಬ್– ಕೆಎಫ್‌ಎಸ್‌ಬಿಎಸ್‌ ತಂಡಗಳು ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.