ಕೆಎಚ್‌ಎಚ್‌ಎ ರಾಜ್ಯ ‘ಎ’ ಡಿವಿಷನ್ ಹಾಕಿ: ರಾಯಚೂರಿನ ಯಂಗ್‌ಸ್ಟಾರ್‌ ತಂಡಕ್ಕೆ ಜಯ ಬೆಂಗಳೂರು: ರಾಯಚೂರಿನ ಯಂಗ್‌ಸ್ಟಾರ್‌ ಹಾಕಿ ಕ್ಲಬ್‌ ತಂಡದವರು ಕೆಎಚ್‌ಎಚ್‌ಎ ರಾಜ್ಯ ‘ಎ’ ಡಿವಿಷನ್‌ ಹಾಕಿ ಟೂರ್ನಿಯಲ್ಲಿ ಗೆಲುವು ಪಡೆದರು. ಬುಧವಾರ ನಡೆದ ಪಂದ್ಯದಲ್ಲಿ ಯಂಗ್‌ಸ್ಟಾರ್‌ ತಂಡ 9–2 ಗೋಲುಗಳಿಂದ ಬೆಂಗಳೂರು ಯುನೈಟೆಡ್‌ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು. ವಿಜಯಿ ತಂಡದ ಅಭಿನಂದನ್‌ (9, 22ನೇ ನಿ.) ಮತ್ತು ಜಿ.ಅಂಕಿತ್‌ (19, 40 ನೇ ನಿ.) ತಲಾ ಎರಡು ಗೋಲುಗಳನ್ನು ಗಳಿಸಿದರು. ಇತರ ಗೋಲುಗಳನ್ನು ಎಂ.ಬಾಬು (12), ಎನ್‌.ಕೆ.ವಿನಾಯಕ್ (13), ಶ್ರೀಕಾಂತ್‌ (34), ಮೊಹಮ್ಮದ್‌ ತಾಲಿಬ್‌ (39) ಮತ್ತು ವೈ.ದೀಪಕ್‌ (49) ತಂದಿತ್ತರು. ಬೆಂಗಳೂರು ಯುನೈಟೆಡ್‌ ಪರ ವಿವೇಕ್ ಉತ್ತಪ್ಪ ಮತ್ತು ಅವಿನಾಶ್‌ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.