ವಾಲಿಬಾಲ್‌: ಚೆನ್ನೈ ಬ್ಲಿಟ್ಜ್‌ ವಿರುದ್ದ ಮುಂಬೈ ಜಯಭೇರಿ ಬೆಂಗಳೂರು: ಚುರುಕಿನ ಪ್ರದರ್ಶನ ನೀಡಿದ ಮುಂಬೈ ಮಿಟಿಯೋರ್ಸ್ ತಂಡದವರು ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಭರ್ಜರಿ ಗೆಲುವು ಪಡೆದರು. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 5–0 ರಲ್ಲಿ ಚೆನ್ನೈ ಬ್ಲಿಟ್ಜ್‌ ವಿರುದ್ದ ಗೆದ್ದಿತು. ಪ್ರಬಲ ಪೈಪೋಟಿ ನಡೆದ ಮೊದಲ ಸೆಟ್‌ಅನ್ನು ಮಿಟಿಯೋರ್ಸ್‌ 15–14 ರಲ್ಲಿ ಗೆದ್ದು ಮುನ್ನಡೆ ಸಾಧಿಸಿತು. ಬಳಿಕದ ಸೆಟ್‌ಗಳನ್ನು 15–6, 15–11, 15–12, 15–9 ರಲ್ಲಿ ಜಯಿಸಿತು. ಇಂದಿನ ಪಂದ್ಯ: ಕ್ಯಾಲಿಕಟ್‌ ಹೀರೋಸ್‌– ಹೈದರಾಬಾದ್‌ ಬ್ಲ್ಯಾಕ್‌ಹಾಕ್ಸ್‌ ಆರಂಭ: ಸಂಜೆ 7 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.