ಬಾಕ್ಸಿಂಗ್‌: ನಿಶಾಂತ್‌ ಶುಭಾರಂಭ ಸೋಫಿಯ, ಬಲ್ಗೇರಿಯಾ: ಭಾರತದ ನಿಶಾಂತ್‌ ದೇವ್‌ ಅವರು ಇಲ್ಲಿ ನಡೆಯುತ್ತಿರುವ ಸ್ಟ್ರಾಂಜ ಮೆಮೋರಿಯಲ್‌ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೋಮವಾರ ನಡೆದ 71 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ನಿಶಾಂತ್‌ 5–0 ರಲ್ಲಿ ಚೀನಾದ ವಾಂಗ್‌ ಪೀಚೆಂಗ್‌ ಅವರನ್ನು ಮಣಿಸಿದರು. ಆರಂಭದಿಂದಲೇ ಮಿಂಚಿನ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸುವಲ್ಲಿ ಭಾರತದ ಬಾಕ್ಸರ್‌ ಯಶಸ್ವಿಯಾದರು. ಮಂಗಳವಾರ ನಡೆಯಲಿರುವ 16ರ ಸುತ್ತಿನ ಸ್ಪರ್ಧೆಯಲ್ಲಿ ಅವರು ಐರ್ಲೆಂಡ್‌ನ ಏಡನ್‌ ವಾಲ್ಶ್‌ ವಿರುದ್ಧ ಪೈಪೋಟಿ ನಡೆಸುವರು. ಮಹಿಳೆಯರ 54 ಕೆ.ಜಿ. ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸುನಿತಾ ಅವರು 0–5 ರಲ್ಲಿ ಅಮೆರಿಕದ ಪೆಟ್ರಿಸಿಯೊ ಶೆರಾ ಕೈಯಲ್ಲಿ ಪರಾಭವಗೊಂಡರು. ಶಿವ ಥಾಪಾ ಮತ್ತು ಮೊಹಮ್ಮದ್‌ ಹುಸಾಮುದ್ದೀನ್‌ ಅವರು ಮಂಗಳವಾರ ಕಣಕ್ಕಿಳಿಯಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.