ಅಥ್ಲೆಟಿಕ್ಸ್‌: ಹನ್ಮಿತ್, ನಿತ್ಯಾ ವೇಗಿಗಳು ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಹನ್ಮಿತ್ ಸಾಲಿಯಾನ ಮತ್ತು ಹಾಸನದ ಬಿ. ನಿತ್ಯಾ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯೋಜಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಶಿವಮೊಗ್ಗದ ಗೌತಮಿ ಗೌಡ ಅವರು ಬಾಲಕಿಯರ ಹೈಜಂಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು. ಮಂಗಳವಾರ ನಡೆದ ಬಾಲಕರ 100 ಮೀ ಓಟದಲ್ಲಿ ಹನ್ಮಿತ್ 10.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಿಹಾನ್ ಕುಮಾರ್‌ ಹಾಗೂ ಮೌನೇಶ್‌ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಹಾಸನದ ಬಿ.ನಿತ್ಯಾ 13.13 ಸೆಕೆಂಡುಗಳಲ್ಲಿ ಗೆಲುವಿನ ಗೆರೆ ದಾಟಿದರೆ, ಬಾಗಲಕೋಟೆ ಯ ವಾಣಿಶ್ರೀ ಹಾಗೂ ಬೆಳಗಾವಿಯ ಸ್ವರ ಸಂತೋಷ ಶಿಂಧೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ಹೈಜಂಪ್‌ ಸ್ಪರ್ಧೆಯಲ್ಲಿ 1.58 ಮೀ ಎತ್ತರ ಜಿಗಿದು ಚಿನ್ನ ಗೆದ್ದ ಗೌತಮಿ, 2015ರಲ್ಲಿ ದಕ್ಷಿಣ ಕನ್ನಡದ ಎಸ್‌.ಬಿ.ಸುಪ್ರಿಯಾ ನಿರ್ಮಿಸಿದ್ದ (1.56 ಮೀ) ದಾಖಲೆ ಮುರಿದರು. ಬೆಂಗಳೂರು ಉತ್ತರದ ಪಿ.ಹರ್ಷಿತಾ (1.56 ಮೀ), ಬಾಗಲಕೋಟೆಯ ನಿಖಿತಾ ಲಂಬಾಣಿ (1.49 ಮೀ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಫಲಿತಾಂಶ: 14 ವರ್ಷದೊಳಗಿನ ಬಾಲಕರ ವಿಭಾಗ: 100 ಮೀ ಓಟ: ಮೊಹಮ್ಮದ್‌ ರುಮಾನ್ ರಾಜಾ (ಚಿಕ್ಕಮಗಳೂರು, ಸಮಯ: 12.04 ಸೆ)–1, ವಿಜೇಶ್‌ ವಿನೋದ್‌ ಚಾರಿ (ಹಾವೇರಿ)–2, ಮಂಜುನಾಥ್ (ಉಡುಪಿ)–3. ಡಿಸ್ಕಸ್‌ ಥ್ರೋ: ಅಣ್ಣೆಪ್ಪ (ಕೋಲಾರ, ದೂರ: 36.87 ಮೀ)–1, ನಿಖಿಲ್ ಬಿ. ರುದ್ರ (ಬಳ್ಳಾರಿ)–2, ದುರ್ಗೇಶ್‌ (ರಾಯಚೂರು)–3. ಬಾಲಕಿಯರ ವಿಭಾಗ: 100 ಮೀ ಓಟ: ಚೇತನಾ ಭಾಸ್ಕರ್‌ (ಚೆಂಗಳೂರು ಉತ್ತರ, ಸಮಯ: 13.25 ಸೆ)–1, ಹರಿಪ್ರಿಯಾ (ಬೆಂಗಳೂರು)–2, ಶಾಲಘ (ಉಡುಪಿ)–3. 600 ಮೀ ಓಟ: ಗುಪುರಿ ಕಾರಿಯಪ್ಪ ಪೂಜಾರಿ (ಚಿಕ್ಕೋಡಿ)–1, ಅಕ್ಷರಾ (ಬೆಳಗಾವಿ)–2, ಎಚ್‌.ಪಿ.ಲಕ್ಷ್ಮಿ (ಶಿವಮೊಗ್ಗ)–3. 17 ವರ್ಷದೊಳಗಿನ ಬಾಲಕರ ವಿಭಾಗ: ಲಾಂಗ್‌ ಜಂಪ್‌: ರಿಹಾನ್‌ ಕುಮಾರ್‌ (ದಕ್ಷಿಣ ಕನ್ನಡ, ದೂರ: 6.41 ಮೀ)–1, ಎಂ.ಎಲ್‌.ಮಾರುತಿ (ಚಿತ್ರದುರ್ಗ)–2, ಛಲೇಶ್ವರ ನಾಯಕ್ (ಬೆಂಗಳೂರು)–3. ಶಾಟ್‌ಪಟ್‌: ವಿನಯ ಜನ್ನಣ್ಣವರ್ (ಚಿಕ್ಕೋಡಿ, ದೂರ: 13.16 ಮೀ)–1, ಶೋಭಿತ್‌ (ದಕ್ಷಿಣ ಕನ್ನಡ)–2, ಇಮ್ರಾನ್‌ ಷರೀಫ್ (ಹಾಸನ)–3. ಡಿಸ್ಕಸ್‌ ಥ್ರೋ: ಶೋಭಿತ್‌ (ದಕ್ಷಿಣ ಕನ್ನಡ, ದೂರ: 36.09 ಮೀ)–1, ಸಮೀರತ್‌ ಮಾಲೀಕ್‌ಸಾಬ್ ನದಾಫ್ (ಚಿಕ್ಕೋಡಿ)–2, ಕೇಶವ್‌ ಕಾಂಬ್ಳೆ (ಬೆಳಗಾವಿ)–3. ಜಾವೆಲಿನ್‌: ಪುಷ್ಪಕ್‌ ನೆಲವಾಡೆ (ಬೀದರ್‌, ದೂರ: 47.93 ಮೀ)–1, ಕೇಶವ್ ಕಾಂಬ್ಳೆ (ಬೆಳಗಾವಿ)–2, ಸುದರ್ಶನ್‌ (ಚಿಕ್ಕಮಗಳೂರು)–3. 5,000 ಮೀ ವೇಗದ ನಡಿಗೆ: ಟಿ.ಎನ್‌.ರಾಕೇಶ್‌ (ಶಿವಮೊಗ್ಗ, ಸಮಯ: 26 ನಿಮಿಷ 26.8 ಸೆಕೆಂಡ್)–1, ವಿನಾಯಕ್‌ ಕಾಂಬ್ಳೆ (ಹಾವೇರಿ)–2, ವಿನೋದ್‌ (ಬೆಳಗಾವಿ)–3. 400 ಮೀ ಓಟ: ನಿತಿನ್ ಗೌಡ (ಬೆಂಗಳೂರು ಗ್ರಾಮಾಂತರ, ಸಮಯ: 50.96 ಸೆಕೆಂಡ್)–1, ದಯಾನಂದ (ದಕ್ಷಿಣ ಕನ್ನಡ)–2, ಸೈಯದ್‌ ಶಬೀರ್‌ (ಬೆಂಗಳೂರು ಉತ್ತರ)–3. ಬಾಲಕಿಯರ ವಿಭಾಗ: ಶಾಟ್‌ಪಟ್‌: ಭವಾನಿ (ಮಂಡ್ಯ, ದೂರ: 10.63 ಮೀ)–1, ಸುಮಾ (ಚಿಕ್ಕಬಳ್ಳಾಪುರ)–2, ಸುಮನ್ ಮಿರಾಂಡ (ಚಿಕ್ಕಬಳ್ಳಾಪುರ). 3,000 ಮೀ ವೇಗದ ನಡಿಗೆ: ಕಮಲಾಕ್ಷಿ (ಬೆಳಗಾವಿ, ಸಮಯ: 16 ನಿ 42.8 ಸೆ)–1, ಸುಪ್ರಿತಾ (ಶಿವಮೊಗ್ಗ)–2, ಬನಶಂಕರಿ (ಚಿಕ್ಕಮಗಳೂರು)–3. 400 ಮೀ ಓಟ: ಶಿಲ್ಪಾ ಹೊಸಮನಿ (ಧಾರವಾಡ, ಸಮಯ: 1 ನಿ 1.2 ಸೆ)–1, ರಚನಾ ನಾಯಕ್ (ಬೆಂಗಳೂರು ಉತ್ತರ)–2, ದಿವ್ಯಾ (ಬೆಂಗಳೂರು ಗ್ರಾಮಾಂತರ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.