ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ರುದ್ರಾಕ್ಷ್‌ಗೆ ಚಿನ್ನ ಕೈರೊ, ಈಜಿಪ್ಟ್: ಹಾಲಿ ವಿಶ್ವ ಚಾಂಪಿಯನ್‌, ಭಾರತದ ರುದ್ರಾಕ್ಷ್‌ ಪಾಟೀಲ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನ 10 ಮೀಟರ್ಸ್ ಏರ್‌ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಮಂಗಳವಾರ ನಡೆದ ಪುರುಷರ ವೈಯಕ್ತಿಕ ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ರುದ್ರಾಕ್ಷ್‌ 16–8ರಿಂದ ಜರ್ಮನಿಯ ಮ್ಯಾಕ್ಸಿಮಿಲನ್‌ ಉಲ್‌ಬ್ರಿಚ್‌ ಅವರನ್ನು ಸೋಲಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ ನಾಲ್ಕಕ್ಕೇರಿತು. ಇದರಲ್ಲಿ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕವಿದೆ. ರ‍್ಯಾಂಕಿಂಗ್ ಸುತ್ತಿನಲ್ಲಿ ರುದ್ರಾಕ್ಷ್‌ 262 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಗಳಿಸಿದ್ದರು. ಉಲ್‌ಬ್ರಿಚ್‌ 260.6 ಪಾಯಿಂಟ್ಸ್ ಗಳಿಸಿದ್ದರು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಹೃದಯ್ ಹಜಾರಿಕಾ ಅರ್ಹತಾ ಸುತ್ತಿನಲ್ಲಿ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.