ಶಾಲಾ ಮಕ್ಕಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌: ದರ್ಶನ್, ‍ಪ್ರಣತಿಗೆ ಚಿನ್ನ ಮೈಸೂರು: ತುಮಕೂರಿನ ಎಚ್‌.ಎ.ದರ್ಶನ್‌ ಮತ್ತು ಬೆಂಗಳೂರಿನ ಪ್ರಣತಿ ಅವರು ಇಲ್ಲಿ ನಡೆಯುತ್ತಿರುವ ಶಾಲಾ ಮಕ್ಕಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ 1,500 ಮೀ. ಓಟದಲ್ಲಿ ಚಿನ್ನ ಗೆದ್ದರು. ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ 17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯ ದರ್ಶನ್‌ 4 ನಿ. 21.4 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಬಾಗಲಕೋಟೆಯ ಪ್ರಶಾಂತ್‌ ಎರಡನೇ ಹಾಗೂ ಕೊಡಗಿನ ಕ್ರೀಡಾ ಶಾಲೆಯ ಬಿ.ವಿ.ದೀಕ್ಷಿತ್ ಮೂರನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರದ ವಿದ್ಯಾನಗರದ ಸರ್ಕಾರಿ ಕ್ರೀಡಾ ಶಾಲೆಯ ಪ್ರಣತಿ, 4 ನಿ. 58.4 ಸೆ.ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಕಡಬ ಸರ್ಕಾರಿ ಪ್ರೌಢಶಾಲೆಯ ಚರಿಷ್ಮಾ ಬೆಳ್ಳಿ ಹಾಗೂ ಹಾಸನದ ಚನ್ನರಾಯಪಟ್ಟಣ ಮೊರಾರ್ಜಿ ಶಾಲೆಯ ಟಿ.ವೈ.ಗಾನವಿ ಕಂಚಿನ ಪದಕ ಗೆದ್ದರು. ಫಲಿತಾಂಶ 17 ವರ್ಷದೊಳಗಿನ ಬಾಲಕರ ವಿಭಾಗ ಟ್ರಿಪಲ್‌ ಜಂಪ್: ಶೇಕ್‌ ಮೊಹಮ್ಮದ್‌ (ದಕ್ಷಿಣ ಕನ್ನಡ, ದೂರ: 13.9 ಮೀ)–1, ಪ್ರಣಯ್‌ ಶೆಟ್ಟಿ (ಉಡುಪಿ)–2, ರಾಮಶಿಶ್‌ (ಹಾಸನ)–3. ಬಾಲಕಿಯರ ವಿಭಾಗ ಡಿಸ್ಕಸ್‌ ಥ್ರೋ: ದೀಪಾ ಎಸ್‌. ಪೂಜಾರಿ (ಬೆಂಗಳೂರು ಉತ್ತರ, ದೂರ: 28.03 ಮೀ) –1, ದೇವಿಕಾ ವಿ. ರಾವ್‌ (ಉಡುಪಿ)–2, ಪಿ.ತ್ರಿಷಿಕಾ (ಬಳ್ಳಾರಿ)–3. ಟ್ರಿಪಲ್‌ ಜಂಪ್: ನಿತ್ಯಶ್ರೀ (ಬೆಂಗಳೂರು ಗ್ರಾಮಾಂತರ, ದೂರ: 10.28 ಮೀ)–1, ಮಾನ್ಯಶ್ರೀ (ಬೆಂಗಳೂರು ಉತ್ತರ)–2, ಗೌತಮಿ ಗೌಡ (ಶಿವಮೊಗ್ಗ)–3. 14 ವರ್ಷದೊಳಗಿನ ಬಾಲಕರ ವಿಭಾಗ ಲಾಂಗ್‌ಜಂಪ್: ಮನೀಷ್‌ ಬಿ. ಶೆಟ್ಟಿ (ದಕ್ಷಿಣ ಕನ್ನಡ, ಎತ್ತರ: 5.39 ಮೀ)–1, ಅಣ್ಣೆಪ್ಪ (ಕೋಲಾರ)–2, ಮೊಹಮ್ಮದ್‌ ವಾಸಿಫ್ (ಧಾರವಾಡ)–3. ಬಾಲಕಿಯರ ವಿಭಾಗ: ಹೈಜಂಪ್‌: ರಕ್ಷಿತಾ (ದಕ್ಷಿಣ ಕನ್ನಡ, ಎತ್ತರ: 1.42 ಮೀ)–1, ಟಿ.ತನುಶ್ರೀ (ಶಿರಸಿ)–2, ಬಿ.ಲೋಚನಾ (ಕೋಲಾರ) ಹಾಗೂ ಸುರಭಿ (ಮೈಸೂರು)–3. ಶಾಟ್‌ಪಟ್‌: ಭಾನವಿ (ಮಂಡ್ಯ, ದೂರ: 10.63 ಮೀ)–1, ಸುಮಾ (ಹಾವೇರಿ)–2, ಸೂಸನ್‌ ಮಿರಾಂಡ (ಚಿಕ್ಕಬಳ್ಳಾಪುರ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.