ವಾಲಿಬಾಲ್‌: ಅಹಮದಾಬಾದ್‌ಗೆ ಪ್ರಶಸ್ತಿ ಕೊಚ್ಚಿ: ಅಹಮದಾಬಾದ್‌ ಡಿಫೆಂಡರ್ಸ್‌ ತಂಡದವರು ಪ್ರೈಮ್ ವಾಲಿಬಾಲ್‌ ಲೀಗ್‌ ಎರಡನೇ ಆವೃತ್ತಿಯ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು. ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಡಿಫೆಂಡರ್ಸ್‌ ತಂಡ 3–2 ಸೆಟ್‌ಗಳಿಂದ ಬೆಂಗಳೂರು ಟಾರ್ಪಿಡೋಸ್‌ ತಂಡವನ್ನು ಮಣಿಸಿತು. ಡಿಫೆಂಡರ್ಸ್‌ ತಂಡ ಮೊದಲ ಎರಡು ಸೆಟ್‌ಗಳನ್ನು 15–7, 15–10 ರಲ್ಲಿ ಗೆದ್ದುಕೊಂಡು ಉತ್ತಮ ಆರಂಭ ಪಡೆಯಿತು. ಮರುಹೋರಾಟ ನಡೆಸಿದ ಟಾರ್ಪಿಡೋಸ್‌ ಮುಂದಿನ ಎರಡು ಸೆಟ್‌ಗಳನ್ನು 20–18, 15–13 ರಲ್ಲಿ ಜಯಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದಿತು. ಇದರಿಂದ ಪಂದ್ಯಕ್ಕೆ ರೋಚಕತೆ ತುಂಬಿತು. ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಅಹಮದಾಬಾದ್‌ 15–10 ರಲ್ಲಿ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.