ಕ್ರೀಡಾ ಮನೋವಿಶ್ಲೇಷಕ ಪ್ಯಾಡಿ ಆಪ್ಟನ್ ಮೈಂಡ್ ಭಾರತ ಹಾಕಿ ತಂಡಕ್ಕೆ ಕೋಚ್ ನವದೆಹಲಿ: ಕ್ರೀಡಾ ಮನೋವಿಶ್ಲೇಷಕ ಪ್ಯಾಡಿ ಆಪ್ಟನ್ ಅವರನ್ನು ಭಾರತ ಹಾಕಿ ತಂಡದ ಮೈಂಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಮುಂಬರಲಿರುವ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಮತ್ತು ಏಷ್ಯನ್ ಗೇಮ್ಸ್‌ ಪೂರ್ವಭಾವಿ ಸಿದ್ಧತೆಗೆ ಅವರು ತಂಡಕ್ಕೆ ನೆರವಾಗಲಿದ್ದಾರೆ. ದಕ್ಷಿಣ ಆಫ್ರಿಕಾದ ಪ್ಯಾಡಿ ಅವರು ಈ ಮೊದಲು ಭಾರತ ಕ್ರಿಕೆಟ್ ತಂಡದ ಮೆಂಟಲ್ ಕಂಡಿಷನಿಂಗ್ ಪರಿಣತರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.