ಕುಸ್ತಿ: ಏಷ್ಯನ್ ಚಾಂಪಿಯನ್‌ಷಿಪ್ ದೆಹಲಿಯಿಂದ ಕಜಕಸ್ತಾನದ ಅಸ್ತಾನಾಗೆ ಸ್ಥಳಾಂತರ ನವದೆಹಲಿ: ಇಲ್ಲಿ ನಡೆಯಬೇಕಿದ್ದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ಅನ್ನು ಕಜಕಸ್ತಾನದ ಅಸ್ತಾನಾಗೆ ಸ್ಥಳಾಂತರ ಮಾಡಲಾಗಿದೆ. ಭಾರತದ ಕುಸ್ತಿ ಕ್ರೀಡೆಯಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕಾರಣ ಯುನೈಟೆಡ್‌ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಗುರುವಾರ ಈ ಕ್ರಮ ಕೈಗೊಂಡಿದೆ. ಏಷ್ಯನ್ ಚಾಂಪಿಯನ್‌ಷಿಪ್‌ ನವದೆಹಲಿಯಲ್ಲಿ ಮಾರ್ಚ್‌ 28ರಿಂದ ಏಪ್ರಿಲ್ 2ರವರೆಗೆ ನಿಗದಿಯಾಗಿತ್ತು. ಈಗ ಅಸ್ತಾನಾದಲ್ಲಿ ಎಪ್ರಿಲ್‌ 7ರಿಂದ 15ರವರೆಗೆ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.