3 ರಂದು ಬಿಟಿಸಿಯಲ್ಲಿ ಗಾಲ್ಫ್‌ ಟೂರ್ನಿ ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ ಆಶ್ರಯದಲ್ಲಿ ಮಾರ್ಚ್‌ 3 ರಂದು ಇಂಡಿಯನ್‌ ಟರ್ಫ್‌ ಇನ್ವಿಟೇಷನ್‌ ಕಪ್‌ ಗಾಲ್ಫ್‌ ಟೂರ್ನಿ ಆಯೋಜಿಸಲಾಗಿದೆ. ಮಾರ್ಚ್‌ 4 ಮತ್ತು 5 ರಂದು ಏರ್ಪಡಿಸಿರುವ ಇಂಡಿಯನ್‌ ಟರ್ಫ್‌ ಇನ್ವಿಟೇಷನ್‌ ಕಪ್‌ ರೇಸ್‌ ಅಂಗವಾಗಿ ಈ ಟೂರ್ನಿ ನಡೆಯಲಿದೆ. ಬೆಂಗಳೂರು ಗಾಲ್ಫ್‌ ಕ್ಲಬ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಟರ್ಫ್‌ ಅಥಾರಿಟಿಗಳು, ನ್ಯಾಷನಲ್‌ ಹಾರ್ಸ್‌ ಬ್ರೀಡಿಂಗ್‌ ಸೊಸೈಟಿ ಆಫ್‌ ಇಂಡಿಯಾ, ದಿ ಇಂಡಿಯನ್‌ ರೇಸ್‌ಹಾರ್ಸ್‌ ಓನರ್ಸ್‌ ಫೆಡರೇಷನ್‌, ದಿ ಟ್ರೇನರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ, ದಿ ಜಾಕಿಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಟಿಸಿ ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.