ಗಾಲ್ಫ್‌: ಚಿಕ್ಕರಂಗಪ್ಪಗೆ ಜಂಟಿ ಆರನೇ ಸ್ಥಾನ ಹುವಾ ಹಿನ್‌, ಥಾಯ್ಲೆಂಡ್‌: ಭಾರತದ ಎಸ್‌. ಚಿಕ್ಕರಂಗಪ್ಪ ಅವರು ಇಲ್ಲಿ ನಡೆದ ಇಂಟರ್‌ನ್ಯಾಷನಲ್ ಸಿರೀಸ್‌ ಥಾಯ್ಲೆಂಡ್‌ ಗಾಲ್ಫ್ ಟೂರ್ನಿಯಲ್ಲಿ ಜಂಟಿ ಆರನೇ ಸ್ಥಾನ ಗಳಿಸಿದರು. ಬ್ಲ್ಯಾಕ್ ಮೌಂಟೇನ್‌ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ವೇಡ್‌ ಒರ್ಮ್‌ಸಬೈ ಪ್ರಶಸ್ತಿ ಜಯಿಸಿದರು. ಥಾಯ್ಲೆಂಡ್‌ನ ಚೊನ್ಲಾಟಿಟ್‌ ಚುವೆನ್‌ಬೂನ್‌ಗಮ್‌ ರ‌ನ್ನರ್ಸ್ಅಪ್ ಮತ್ತು ಕೊರಿಯಾದ ಯೊಂಗ್ಸು ಕಿಮ್‌ ಮೂರನೇ ಸ್ಥಾನ ತಮ್ಮದಾಗಿಸಿಕೊಡರು. ಭಾರತದ ಇನ್ನುಳಿದ ಗಾಲ್ಫ್‌ ಪಟುಗಳಾದ ಕರಣ್‌ದೀಪ್ ಕೊಚ್ಚಾರ್ ಜಂಟಿ 22, ಹನಿ ಬೈಸೊಯಾ ಜಂಟಿ 34, ವೀರ್‌ ಅಹ್ಲಾವತ್ ಮತ್ತು ಗಗನ್‌ಜೀತ್ ಭುಲ್ಲರ್ ಜಂಟಿ 48ನೇ ಮತ್ತು ಜ್ಯೋತಿ ರಾಂಧವಾ ಜಂಟಿ 72ನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.