ಏಷ್ಯನ್‌ ಕ್ರಾಸ್‌ ಕಂಟ್ರಿ: ಶಿವಾಜಿಗೆ ಬೆಳ್ಳಿ ಕಠ್ಮಂಡು (ಪಿಟಿಐ): ಕರ್ನಾಟಕದ ಶಿವಾಜಿ ಪಿ.ಎಂ. ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನ 8 ಕಿ.ಮೀ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮಂಗಳವಾರ ನಡೆದ 20 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಶಿವಾಜಿ 27.39 ನಿಮಿಷಗಳಲ್ಲಿ ಗುರಿ ತಲುಪಿದರು. 18 ವರ್ಷದೊಳಗಿನ ಬಾಲಕಿಯರ ವಿಭಾಗದ 6 ಕಿ.ಮೀ ಸ್ಪರ್ಧೆಯಲ್ಲಿ ಸೃಷ್ಟಿ ರೆಡೆಕರ್ (24 ನಿ.15 ಸೆ.) ಚಿನ್ನ ಮತ್ತು ಬೇಬಿ (24.42 ನಿ.) ಕಂಚು ಗೆದ್ದರು. ಭಾರತವು ತಂಡ ವಿಭಾಗದಲ್ಲಿ ಮೂರು ಚಿನ್ನ ಹಾಗೂ ಒಂದು ಕಂಚು ಗೆದ್ದುಕೊಂಡಿತು. ಭಾರತ ತಂಡ 20 ವರ್ಷದೊಳಗಿನ ಬಾಲಕರ 8 ಕಿ.ಮೀ. ಓಟ, 18 ವರ್ಷದೊಳಗಿನ ಬಾಲಕಿಯರ 6 ಕಿ.ಮೀ. ಓಟ ಮತ್ತು ಸೀನಿಯರ್‌ ಮಹಿಳೆಯರ 10 ಕಿ.ಮೀ. ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿತು. ಸೀನಿಯರ್‌ ಪುರುಷರ 10 ಕಿ.ಮೀ ಸ್ಪರ್ಧೆಯಲ್ಲಿ ಕಂಚು ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.