ಬೆಂಗಳೂರು ವಿಶ್ವ 10ಕೆ: 90ರ ರಘುನಾಥ್ ಸ್ಪರ್ಧೆ ಬೆಂಗಳೂರು: 15ನೇ ಆವೃತ್ತಿಯ ಬೆಂಗಳೂರು ವಿಶ್ವ 10ಕೆ ಮೇ 21ರಂದು ನಿಗದಿಯಾಗಿದೆ. 90 ವರ್ಷ ವಯಸ್ಸಿನ ರಘುನಾಥ್‌ ಬೈಲಹಳ್ಳಿ ಜನಾರ್ದನ್‌ ಇಲ್ಲಿ ಸ್ಪರ್ಧಿಸಲಿರುವ ಹಿರಿಯ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಳ್ಳಲಿದ್ದಾರೆ. ರೈಲ್ವೆ ಉದ್ಯೋಗಿಯಾಗಿದ್ದ ರಘುನಾಥ್‌ 30 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಸಿಡ್ನಿ, ದುಬೈ ಸೇರಿದಂತೆ ವಿಶ್ವಮಟ್ಟದ ಮ್ಯಾರಥಾನ್‌ಗಳಲ್ಲಿ ಸ್ಪರ್ಧಿಸಿದ ಅನುಭವ ಅವರದು. ಈ ಹಿಂದೆ ಸೈಕ್ಲಿಸ್ಟ್ ಕೂಡ ಆಗಿದ್ದರು. 30 ವರ್ಷದ ಹಿಂದೆ ರಘುನಾಥ್ ಅವರನ್ನು ಮೂರ್ಛೆರೋಗ ಕಾಡಿತ್ತು. ಅದನ್ನು ಮೀರಿದ ಅವರು, ಉತ್ಸಾಹ ಕಳೆದುಕೊಳ್ಳದೆ ಮುನ್ನುಗ್ಗಿದ್ದಾರೆ. 65 ವರ್ಷದ ಕೋದಂಡಪಾಣಿ ಹಾಗೂ ಮಹಿಳೆಯರ ಸ್ಪರ್ಧೆಯಲ್ಲಿ 70 ವರ್ಷದ ಶಾರದಾ ವೆಂಕಟರಾಮನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಆಯೋಜಕ ಸಂಸ್ಥೆ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್‌ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.