ಸೈಕ್ಲಿಂಗ್‌ ಫೆಡರೇಷನ್‌ಗೆ ಪಂಕಜ್ ಅಧ್ಯಕ್ಷ ನವದೆಹಲಿ (ಪಿಟಿಐ): ನೊಯ್ಡಾದ ಬಿಜೆಪಿ ಶಾಸಕ ಪಂಕಜ್ ಸಿಂಗ್ ಅವರು ಭಾರತ ಸೈಕ್ಲಿಂಗ್‌ ಫೆಡರೇಷನ್‌ (ಸಿಎಫ್‌ಐ) ಅಧ್ಯಕ್ಷರಾಗಲಿದ್ದಾರೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ಶನಿವಾರ ಚುನಾವಣೆ ಕುರಿತ ಸಭೆ ನಡೆಯಲಿದೆ. ಅಧ್ಯಕ್ಷ ಹುದ್ದೆಗೆ ಪಂಕಜ್‌ ಒಬ್ಬರೇ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರು ಮತ್ತು 24 ಸದಸ್ಯರ ಕಾರ್ಯಕಾರಿ ಸಮಿತಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಈ ಮೊದಲು ಪಂಜಾಬ್‌ನ ಮಾಜಿ ಸಚಿವ ಪರಮಿಂದರ್‌ ಸಿಂಗ್‌ ಧಿಂಡ್ಸಾ ಅವರು ಸಿಎಫ್‌ಐ ಅಧ್ಯಕ್ಷರಾಗಿದ್ದರು. ಅವರು ಸತತ ಮೂರು ಅವಧಿಗೆ (12 ವರ್ಷ) ಅಧಿಕಾರ ನಡೆಸಿದ್ದರಿಂದ ನಿಯಮದ ಪ್ರಕಾರ ಈ ಬಾರಿ ಸ್ಪರ್ಧೆಗೆ ಅರ್ಹರಾಗಿಲ್ಲ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್‌, ಈ ಹಿಂದೆ ಭಾರತ ಫೆನ್ಸಿಂಗ್ ಸಂಸ್ಥೆಯ ಅಧ್ಯಕ್ಷ ಹುದ್ದೆಯಲ್ಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.