ಗಾಲ್ಫ್‌: ಎಸ್‌ಎನ್‌ಸಿ ಕ್ಯಾಡೀಸ್ ಓಪನ್- ಶಶಿಕುಮಾರ್‌ ಪ್ರಥಮ ಬೆಂಗಳೂರು: ಎಂ. ಶಶಿಕುಮಾರ್ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ನಡೆದ ಎಸ್‌.ಎನ್.ಸಿ ಕ್ಯಾಡೀಸ್ ಓಪನ್ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಅವರು 68 ಗ್ರಾಸ್ ಸಾಧನೆ ಮಾಡಿದರು. ಇದೇ ವಿಭಾಗದಲ್ಲಿ ಸದಾಶಿವಂ (71 ಗ್ರಾಸ್) ಮತ್ತು ಎಸ್. ಸುನಿಲ್ (72 ಗ್ರಾಸ್) ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಆದರು. ಫಲಿತಾಂಶಗಳು: ಓಪನ್ ವಿಭಾಗ: ಎಂ. ಶಶಿಕುಮಾರ್ –1, ಸದಾಶಿವಂ (ಟಿಸಿಜಿ) –ರನ್ನರ್ ಅಪ್ 1, ಎಸ್. ಸುನಿಲ್ –ರನ್ನರ್ ಅಪ್ 2. ಓಪನ್ ಕೋಚಸ್‌ ವಿಭಾಗ: ಅಕ್ಬರ್ –1, ಮಾರ್ಟಿನ್ –2 ಕ್ಯಾಡೀಸ್ ಪಟ್ಟಿಂಗ್ ಸ್ಪರ್ಧೆ: ಚರಣ್ –1, ಕಾರ್ತಿಕ್ –ರನ್ನರ್ ಅಪ್ 1, ಕಾಂತರಾಜ್ –ರನ್ನರ್ ಅಪ್ 2 ಅಡ್ಮಿನ್ ಸಿಬ್ಬಂದಿ ಪಟ್ಟಿಂಗ್: ಕುಮಾರ್ (ಜಿಮ್) –1, ಚಂದ್ರಶೇಖರ್ (ಗಾರ್ಡನ್)–ರನ್ನರ್ ಅಪ್ 1, ಭರತ್ ರಾವ್ –ರನ್ನರ್ ಅಪ್ 2 ಕೋರ್ಸ್ ಸಿಬ್ಭಂದಿ ಪಟ್ಟಿಂಗ್: ಸಿ ರವಿ –1, ಎಚ್‌.ಕೆ. ರಮೇಶ್–ರನ್ನರ್ ಅಪ್ 1, ನಿಂಗಯ್ಯ –ರನ್ನರ್ ಅಪ್ 2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.