ವಿಶ್ವಕಪ್‌ ಶೂಟಿಂಗ್‌: ವರುಣ್‌ಗೆ ಕಂಚು ನವದೆಹಲಿ : ವರುಣ್‌ ತೋಮರ್ ಅವರು ಕೈರೊದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಪದಕದ ಖಾತೆ ತೆರೆದಿದ್ದಾರೆ. ಟೂರ್ನಿಯ ಮೊದಲ ದಿನವಾದ ಭಾನುವಾರ 19 ವರ್ಷದ ವರುಣ್‌, 10 ಮೀಟರ್ಸ್ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಪದಕ ಜಯಿಸಿದರು. ಭಾರತದ ಸರಬ್ಜೋತ್‌ ಸಿಂಗ್‌ ಮತ್ತು ವರುಣ್‌ ಮೂರನೇ ಸ್ಥಾನದ ರ‍್ಯಾಂಕಿಂಗ್‌ ಸುತ್ತಿನಲ್ಲಿ ಸಮಾನ (250.6) ಅಂಕ ಗಳಿಸಿದ್ದರು. ಆದರೆ ಶೂಟ್‌ಆಫ್‌ನಲ್ಲಿ ವರುಣ್ ಮೇಲುಗೈ ಸಾಧಿಸಿದರು. ಸ್ಲೋವಾಕಿಯಾದ ಜುರಾಜ್‌ ತುಜಿನ್‌ಸ್ಕಿ ಫೈನಲ್‌ನಲ್ಲಿ 17–15ರಿಂದ ಇಟಲಿಯ ಪಾಲೊ ಮೊನ್ನಾ ಅವರನ್ನು ಮಣಿಸಿ ಚಿನ್ನ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.