ಚೆಸ್‌: ಅಭಿನವ್‌, ಲಿಯಾಗೆ ಗೆಲುವು ಬೆಂಗಳೂರು: ಅಭಿನವ್‌ ಆನಂದ್‌ ಮತ್ತು ಲಿಯಾ ಆರ್‌. ಜೋಸೆಫ್‌ ಅವರು ಇಲ್ಲಿ ನಡೆಯುತ್ತಿರುವ 9 ವರ್ಷದೊಳಗಿನವರ ರಾಜ್ಯ ಚೆಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚೆಸ್‌ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಹೊಸಕೋಟೆ ತಾಲ್ಲೂಕಿನ ದುನ್ನಸಂದ್ರದ ಶೃಂಗ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ಪಂದ್ಯದಲ್ಲಿ ಅಭಿನವ್‌ ಅವರು ಎಂ.ದೇವಾಂಶ್‌ ವಿರುದ್ಧ ಜಯಿಸಿದರು. ಬಾಲಕರ ವಿಭಾಗದಲ್ಲಿ ಸಮಕ್ಷ್ ಅಶೋಕ್, ವೆಂಕಟ ನಾಗ, ಇಶಾನ್‌ ಖೇರ್, ನಿಶ್ಚಿತ್‌ ಗುರುಕರ್‌, ಇಶಾನ್‌ ಬನ್ಸಾಲಿ, ವಿದಿತ್‌, ವಿಯಾನ್‌ ಬನ್ಚೋರ್ ಮತ್ತು ಹರ್ಷಿತ್‌ ರಾಮ್ ಅವರು ತಮ್ಮ ಎರಡೂ ಪಂದ್ಯಗಳನ್ನು ಗೆದ್ದುಕೊಂಡರು. ಬಾಲಕಿಯರ ವಿಭಾಗದ ಎರಡನೇ ಪಂದ್ಯದಲ್ಲಿ ಲಿಯಾ ಅವರು ನಿಯೊಲಾ ಪಿಂಟೊ ಅವರನ್ನು ಮಣಿಸಿದರು. ಬಿ.ಎ.ಆಕಾಂಕ್ಷಾ, ರಾಜೇಶ್ವರಿ ಅಯ್ಯಪ್ಪನ್, ರಿಶ್ವಿತಾ ಮಹಾಜನ್, ರಿದ್ವಿ ಮಧುಕಿರಣ್, ರಿಜೆಲ್‌ ಅಲಿಡಾ ಡಿಸೋಜಾ, ಸೌಖ್ಯಾ ಕೆ.ಆರ್‌. ಮತ್ತು ಎಸ್‌.ಸಾನ್ವಿ ಅವರು ಮೊದಲ ಎರಡೂ ಪಂದ್ಯಗಳನ್ನು ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.