ರಾಷ್ಟ್ರೀಯ ಜೂನಿಯರ್‌, ಸಬ್‌ಜೂನಿಯರ್‌ ಈಜು ಚಾಂಪಿಯನ್‌ಷಿಪ್: ದಾಖಲೆ ಬರೆದ ರಿಧಿಮಾ ಬೆಂಗಳೂರು: ರಾಷ್ಟ್ರೀಯ ಸಬ್‌ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಬುಧವಾರ ಕರ್ನಾಟಕ ಮೇಲುಗೈ ಸಾಧಿಸಿತು. ಸದ್ಯ 34 ಚಿನ್ನ ಸೇರಿ ಒಟ್ಟು 72 ಪದಕಗಳನ್ನು ಗೆದ್ದ ರಾಜ್ಯ ತಂಡದವರು ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ರಿಧಿಮಾ ವೀರೇಂದ್ರ ಕುಮಾರ್‌ ಅವರು 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್ (ಒಂದನೇ ಗುಂಪು) ವಿಭಾಗದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 1 ನಿಮಿಷ 4.87 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು, ಒಲಿಂಪಿಯನ್, ಗುಜರಾತ್‌ನ ಮಾನಾ ಪಟೇಲ್‌ (1:05.30) 2014ರಲ್ಲಿ ನಿರ್ಮಿಸಿದ್ದ ದಾಖಲೆ ಮೀರಿದರು. ಬಾಲಕರ ಒಂದನೇ ಗುಂಪಿನ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಕರ್ನಾಟಕದ ಸಂಭವ್ ಆರ್‌. ಚಿನ್ನ ಗಳಿಸಿದರು. ರಾಜ್ಯದ ಜಾಸ್‌ ಸಿಂಗ್‌ ಬಾಲಕರ ಐದನೇ ಗುಂಪಿನ 100 ಮೀ. ಫ್ರೀಸ್ಟೈಲ್‌ನಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ವೈಯಕ್ತಿಕ ಚಿನ್ನ ತಮ್ಮದಾಗಿಸಿಕೊಂಡರು. ಎರಡನೇ ದಿನದ ಫಲಿತಾಂಶಗಳು: ಬಾಲಕರು: 400 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ಅನೀಶ್‌ ಎಸ್‌. ಗೌಡ–1, ಕಾಲ: 4:00.11 (ನೂತನ ದಾಖಲೆ), ಶೋನ್ ಗಂಗೂಲಿ–2 (ಇಬ್ಬರೂ ಕರ್ನಾಟಕ), ವೇದಾಂತ್ ಮಾಧವನ್‌ (ಮಹಾರಾಷ್ಟ್ರ)–3 *ಹಿಂದಿನ ದಾಖಲೆ: ಗುಜರಾತ್‌ನ ಆರ್ಯನ್ ನೆಹ್ರಾ (4:00.91, 2019) ಹೆಸರಿನಲ್ಲಿತ್ತು. ಮೂರನೇ ಗುಂಪು: ಯಜ್ಞ ಸಾಯಿ ಎಂ (ಆಂಧ್ರಪ್ರದೇಶ)–1 ಕಾಲ: 4:59.32, ಯಶಸ್ವಿ ನ್ಯೂನ್‌ (ತೆಲಂಗಾಣ)–2, ರಕ್ಷಣ್ ಪಿ. (ಕರ್ನಾಟಕ)–3. 200 ಮೀ. ಬಟರ್‌ಫ್ಲೈ: ಎರಡನೇ ಗುಂಪು: ದೇವ ಗಣೇಶ್ ಎನ್‌ (ಆಂಧ್ರಪ್ರದೇಶ)–1 ಕಾಲ: 2:17.90, ನಿರಂಜನ್ ಕಾರ್ತಿಕ್‌ ಬಿ. (ಕರ್ನಾಟಕ)–2, ಆರುಷ್ ಜಲಾ (ಗುಜರಾತ್‌)–3. 200 ಮೀ. ವೈಯಕ್ತಿಕ ಮೆಡ್ಲೆ: ನಾಲ್ಕನೇ ಗುಂಪು: ಕಬಿಲನ್‌ ಟಿ. (ತಮಿಳುನಾಡು)–1, ಕಾಲ: 2:46.94, ಅಥರ್ವ್ ಪಾಲ್ ಸಿಂಗ್ ರಾಥೋಡ್‌ (ಕರ್ನಾಟಕ)–2, ವಿಹಾನ್ ಚತುರ್ವೇದಿ (ಮಹಾರಾಷ್ಟ್ರ)–3. 200 ಮೀ. ಬ್ಯಾಕ್‌ಸ್ಟ್ರೋಕ್‌: ಒಂದನೇ ಗುಂಪು: ಉತ್ಕರ್ಷ್‌ ಪಾಟೀಲ್‌ (ಕರ್ನಾಟಕ)–1, ಕಾಲ:2:06.75, ದೇವಾಂಶ್ ಪರಮಾರ್‌ (ಗುಜರಾತ್‌)–2, ಸಾಯಿ ನಿಹಾರ್ ಬಿಕ್ಕಿನಾ (ತೆಲಂಗಾಣ)–3. 100 ಮೀ. ಬ್ಯಾಕ್‌ಸ್ಟ್ರೋಕ್‌: ಎರಡನೇ ಗುಂಪು: ಉತ್ಕರ್ಷ್‌ ಗೋರ್ (ಮಹಾರಾಷ್ಟ್ರ)–1, ಕಾಲ: 1:02.95, ರಿಷಭ್ ದಾಸ್ (ಮಹಾರಾಷ್ಟ್ರ)–2, ಸುಹಾಸ್ ಪ್ರೀತಂ ( ತೆಲಂಗಾಣ)–3. 100 ಮೀ. ಬಟರ್‌ಫ್ಲೈ: ಮೂರನೇ ಗುಂಪು: ಅಕ್ಷಜ್ ಠಾಕೂರಿಯಾ (ಕರ್ನಾಟಕ)–1, ಕಾಲ:1:06.55, ನಿತೀಶ್ ಎಂ.ಎಸ್‌. (ತಮಿಳುನಾಡು)–2, ದೇವಜೀತ್ ದೆಂಕಿ (ಬಂಗಾಳ)–3. 100 ಮೀ. ಫ್ರೀಸ್ಟೈಲ್‌: ನಾಲ್ಕನೇ ಗುಂಪು: ಶರಣ್ ಶ್ರೀಧರ್‌ (ಕರ್ನಾಟಕ)–1, ಕಾಲ:1:06.85, ಕಬಿಲನ್‌ (ತಮಿಳುನಾಡು)–2, ಇಶಾನ್ ಘೋಷ್‌ (ಬಂಗಾಳ)–3. 100 ಮೀ. ಫ್ರೀಸ್ಟೈಲ್‌:ಐದನೇ ಗುಂಪು: ಜಾಸ್‌ ಸಿಂಗ್ (ಕರ್ನಾಟಕ)–1, ಕಾಲ: 1:09.47, ಮೋನಿಶ್ ನಾಯ್ಡು ಪಿ. (ತಮಿಳುನಾಡು)–2, ಎಸ್‌. ಸೋಮಶೇಖರ್‌ (ಕರ್ನಾಟಕ)–3. 100 ಮೀ. ಬಟರ್‌ಫ್ಲೈ: ಒಂದನೇ ಗುಂಪು: ಸಂಭವ್ ಆರ್‌. (ಕರ್ನಾಟಕ)–1, ಕಾಲ: 55.87, ವಿಕ್ರಂ ಚಾಂಗ್ಮಯಿ (ಅಸ್ಸಾಂ)–2, ಹರ್ಷ ಸರೋಹಾ (ಹರಿಯಾಣ)–3. 50 ಮೀ. ಬ್ರೆಸ್ಟ್‌ಸ್ಟ್ರೋಕ್: ಎರಡನೇ ಗುಂಪು: ಅಭಿಷೇಕ್ ಕನೌಜಿಯಾ (ಎಸ್‌ಎಸ್‌ಬಿಸಿ)–1, ಕಾಲ: 32.98, ಸೂರ್ಯ ಜೋಯಪ್ಪ. ಓ. ಆರ್‌ (ಕರ್ನಾಟಕ)–2, ಭಾಗ್ಯ ಗೆಹ್ಲಾವುತ್ (ದೆಹಲಿ)–3. 4X100 ಮೀ. ಮೆಡ್ಲೆ: ಒಂದನೇ ಗುಂಪು: ಕರ್ನಾಟಕ–1, ಕಾಲ: 3:56.35 (ನೂತನ ದಾಖಲೆ), ಬಂಗಾಳ–2, ತಮಿಳುನಾಡು–3 (4:00.76: ಹಿಂದಿನ ದಾಖಲೆ ಕರ್ನಾಟಕದ ಹೆಸರಿನಲ್ಲೇ ಇತ್ತು). ಬಾಲಕಿಯರು: 400 ಮೀ. ಫ್ರೀಸ್ಟೈಲ್: ಒಂದನೇ ಗುಂಪು: ಆನ್ಯಾ ವಾಲಾ (ಮಹಾರಾಷ್ಟ್ರ)–1, ಕಾಲ: 4:34.54, ವೃತ್ತಿ ಅಗರವಾಲ್‌ (ತೆಲಂಗಾಣ)–2, ಶಕ್ತಿ ಬಾಲಕೃಷ್ಣನ್‌ (ತಮಿಳುನಾಡು)–3. 200 ಮೀ. ಬಟರ್‌ಫ್ಲೈ: ಎರಡನೇ ಗುಂಪು: ಹರ್ಷಿಕಾ ರಾಮಚಂದ್ರನ್‌ (ಕರ್ನಾಟಕ)–1, ಕಾಲ: 2:26.56, ರಿತಿಕಾ ಬಿ.ಎಂ (ಕರ್ನಾಟಕ)–2, ಧೃತಿ ಅಗರವಾಲ್ (ಮಹಾರಾಷ್ಟ್ರ)–3. 200 ಮೀ. ವೈಯಕ್ತಿಕ ಮೆಡ್ಲೆ: ನಾಲ್ಕನೇ ಗುಂಪು: ಅನ್ವೇಷಾ ಖಾನಿಕರ್‌ (ಅಸ್ಸಾಂ)–1, ಕಾಲ: 3:00.85, ಸಾನ್ವಿ ದೇಶ್ವಾಲ್‌ (ಮಹಾರಾಷ್ಟ್ರ)–2, ಅನ್ನಿಕಾ ದೆಬೊರಾ (ತೆಲಂಗಾಣ)–3. 100 ಮೀ. ಬ್ಯಾಕ್‌ಸ್ಟ್ರೋಕ್‌: ಎರಡನೇ ಗುಂಪು: ರಿಧಿಮಾ ವೀರೇಂದ್ರ ಕುಮಾರ್‌ (ಕರ್ನಾಟಕ)–2, ಕಾಲ: 1:04.87 (ನೂತನ ದಾಖಲೆ), ಶಾಲಿನಿ ದೀಕ್ಷಿತ್ (ಕರ್ನಾಟಕ)–2, ನಿತ್ಯಾ ಸಾಗಿ (ತೆಲಂಗಾಣ)–3, (1:05.30, ಈ ಹಿಂದಿನ ದಾಖಲೆ ಗುಜರಾತ್‌ನ ಮಾನಾ ಪಟೇಲ್ ಹೆಸರಿನಲ್ಲಿತ್ತು). 100 ಮೀ. ಬಟರ್‌ಫ್ಲೈ: ಮೂರನೇ ಗುಂಪು: ತನಿಶಾ ಗುಪ್ತಾ (ಕರ್ನಾಟಕ)–1, ಕಾಲ: 1:10.12, ಸಾರಾಕ್ಷಿ ದಂಗತ್‌ (ಮಹಾರಾಷ್ಟ್ರ)–2, ಅನನ್ಯಾ ಎ.ಜೆ. (ಕರ್ನಾಟಕ)–3. 200 ಮೀ. ಬ್ಯಾಕ್‌ಸ್ಟ್ರೋಕ್‌: ಒಂದನೇ ಗುಂಪು: ಸಂಜನಾ ಪ್ರಭುಗಾಂವಕರ್‌ (ಗೋವಾ)–1, ಕಾಲ: 2:28.71, ಪಲಕ್ ಧಾಮಿ (ಮಹಾರಾಷ್ಟ್ರ)–2, ಪಲಕ್ ಜೋಶಿ (ಮಹಾರಾಷ್ಟ್ರ)–3. 100 ಮೀ. ಫ್ರೀಸ್ಟೈಲ್‌: ನಾಲ್ಕನೇ ಗುಂಪು: ಅಲಿಸ್ಸಾ ಸ್ವೀಡಲ್ ರೆಗೊ (ಕರ್ನಾಟಕ)–1, ಕಾಲ: 1:08.72, ತ್ರೀಶಾ ಸಿಂಧು (ಕರ್ನಾಟಕ)–2, ಜೋಯಾ ಜನ್ನತ್‌ (ಬಂಗಾಳ)–3. 100 ಮೀ. ಫ್ರೀಸ್ಟೈಲ್‌: ಐದನೇ ಗುಂಪು: ಲಾಸ್ಯ ಶ್ರೀ ಕೆ. (ಆಂಧ್ರಪ್ರದೇಶ)–1, ಕಾಲ: 1:12.46, ಧೃತಿ ಕರಿಬಸವೇಶ್ವರ (ಕರ್ನಾಟಕ)–2, ಅನುಷ್ಕಾ ವಿಜಾಪುರ (ಮಹಾರಾಷ್ಟ್ರ)–3. 100 ಮೀ. ಬಟರ್‌ಫ್ಲೈ: ಒಂದನೇ ಗುಂಪು: ಆಸ್ಥಾ ಚೌಧರಿ (ಅಸ್ಸಾಂ)–1 ಕಾಲ: 1:02.71 (ನೂತನ ದಾಖಲೆ), ಅಪೇಕ್ಷಾ ಫರ್ನಾಂಡಿಸ್‌ (ಮಹಾರಾಷ್ಟ್ರ)–2, ನೀನಾ ವೆಂಕಟೇಶ್ (ಕರ್ನಾಟಕ)–3. 50 ಮೀ. ಬ್ರೆಸ್ಟ್‌ಸ್ಟ್ರೋಕ್: ಎರಡನೇ ಗುಂಪು: ವಿಹಿತಾ ನಯಮಾ (ಕರ್ನಾಟಕ)–1, ಕಾಲ: 36.10, ಮಾನವಿ ವರ್ಮಾ (ಕರ್ನಾಟಕ)–2, ವೇನಿಕಾ ಪಾರಿಖ್ (ಗುಜರಾತ್‌)–3. 4X100 ಮೀ. ಮೆಡ್ಲೆ: ಕರ್ನಾಟಕ–1, ಕಾಲ:4:32.69 (ನೂತನ ದಾಖಲೆ), ಮಹಾರಾಷ್ಟ್ರ–2, ಅಸ್ಸಾಂ–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.