ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್‌ಗೆ ಪ್ರಶಸ್ತಿ ಲಾ ನೂಸಿಯಾ, ಸ್ಪೇನ್‌ : ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಇನಿಯನ್‌ ಅವರು ಲಾ ನೂಸಿಯಾ ಓಪನ್ ಚೆಸ್‌ ಟೂರ್ನಿಯಲ್ಲಿ ಮಂಗಳ ವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 19 ವರ್ಷದ ಇನಿಯನ್‌ (ಇಎಲ್‌ಒ ರೇಟಿಂಗ್‌ 2529), ಉಕ್ರೇನ್‌ನ ಆ್ಯಂಡ್ರಿ ಸುಮೆಟ್ಸ್ ಮತ್ತು ಚಿಲಿಯ ರೊಡ್ರಿಗೊ ವಾಸ್ಕೆಜ್‌ ಶ್ರೋಡರ್‌ ತಲಾ ಏಳು ಪಾಯಿಂಂಟ್ಸ್ ಕಲೆಹಾಕಿದರು. ಆದರೆ ಉತ್ತಮ ಟೈಬ್ರೇಕ್ ಸ್ಕೋರ್ ಆಧಾರದಲ್ಲಿ ಇನಿಯನ್‌ಗೆ ಪ್ರಶಸ್ತಿ ಒಲಿಯಿತು. ಒಂಬತ್ತು ಸುತ್ತುಗಳಲ್ಲಿ ಇನಿಯನ್ ಅಜೇಯರಾಗುಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.