ಸಹನಾ, ಸಮರ್ಥ್‌ಗೆ ಪ್ರಶಸ್ತಿ ಗರಿ ಬೆಂಗಳೂರು: ಸಹನಾ ಎಚ್‌. ಮೂರ್ತಿ, ಸಮರ್ಥ್‌ ಕುರಡಿಕೇರಿ ಮತ್ತು ಆಯಷ್‌ ಕೆ. ಅವರು ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಜೂನಿಯರ್ ಬಾಲಕಿಯರ, ಪುರುಷರ ಮತ್ತು ನಾನ್‌ ಮೆಡಲಿಸ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಲ್ಲೇಶ್ವರ ಸಂಸ್ಥೆಯ ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕಿಯರ ಫೈನಲ್‌ನಲ್ಲಿ ಸಹನಾ 11–7, 11–7, 11–5, 9–11, 11–8ರಿಂದ ತೃಪ್ತಿ ಪುರೋಹಿತ್ ಸವಾಲು ಮೀರಿದರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಹನಾ 11–9, 11–3, 11–5, 11–8ರಿಂದ ಕರುಣಾ ಗಜೇಂದ್ರನ್ ಎದುರೂ, ತೃಪ್ತಿ 11–13, 7–11, 11–3, 11–3, 11–4, 11–7ರಿಂದ ಪರ್ಣವಿ ಎದುರು ಜಯ ಸಾಧಿಸಿದ್ದರು. ಪುರುಷರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಮರ್ಥ್‌ ಕುರಡಿಕೇರಿ 11–9, 8–11, 11–7, 12–10, 11–7ರಿಂದ ಶ್ರೇಯಸ್ ತೆಲಂಗ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಸಮರ್ಥ್‌ 11–7, 13–11, 11–7, 11–1ರಿಂದ ಆಕಾಶ್‌ ಕೆ.ಜೆ. ಎದುರು, ಶ್ರೇಯಸ್‌ 11–8, 11–8, 11–13, 9–11, 11–9, 7–11, 11–9ರಿಂದ ರಕ್ಷಿತ್ ಬಾರಿಗಿಡದ ವಿರುದ್ಧ ಜಯಭೇರಿ ಮೊಳಗಿಸಿದರು. ನಾನ್‌ ಮೆಡಲಿಸ್ಟ್‌ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಆಯುಷ್‌ ಕೆ. 11–7, 11–6, 12–14, 11–7ರಿಂದ ದಿವಿತ್‌ ಯಕ್ಕುಂಡಿ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು. ಸೆಮಿಫೈನಲ್‌ಗಳಲ್ಲಿ ಆಯುಷ್‌ 12–10, 11–9, 12–10ರಿಂದ ಹೃಷಿಕ್ ಎನ್‌. ಅರಸ್‌ ಎದುರು ಮತ್ತು ದಿವಿತ್‌ 11–9, 11–8, 4–11, 11–9ರಿಂದ ಶ್ರೀಕರ್ ಚೌಧರಿ ಎದುರು ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.