ಅಥ್ಲಿಟ್ ಅಗ್ನೇಸ್ ಟಿರೊಪ್ ಹತ್ಯೆ ನೈರೋಬಿ, ಕೆನ್ಯಾ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ವಿಜೇತ ಅಥ್ಲಿಟ್ ಅಗ್ನೇಸ್ ಟಿರೊಪ್ ಅವರನ್ನು ಕೊಲೆ ಮಾಡಲಾಗಿದೆ. ಅಗ್ನೇಸ್ ಅವರ ಮನೆಯಲ್ಲಿಯೇ ದುರ್ಘಟನೆ ನಡೆದಿದೆ. 25 ವರ್ಷದ ಆಗ್ನೇಸ್ ಅವರನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಅವರ ಪತಿಯೇ ಈ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಅಥ್ಲೆಟಿಕ್ಸ್ ಕೆನ್ಯಾ ಬುಧವಾರ ತಿಳಿಸಿದೆ. ಆಗ್ನೇಸ್ ಅವರು ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 5000 ಮೀಟರ್ಸ್ ಓಟದಲ್ಲಿ ಕೆನ್ಯಾ ದೇಶವನ್ನು ಪ್ರತಿನಿಧಿಸಿದ್ದರು. ನಾಲ್ಕನೇ ಸ್ಥಾನಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.