ಚೆಸ್‌: ಭಾರತದ ವಿಶ್ವನಾಥನ್ ಆನಂದ್ ವೀಕ್ಷಕ ವಿವರಣೆಕಾರ ಚೆನ್ನೈ: ಭಾರತದ ವಿಶ್ವನಾಥನ್ ಆನಂದ್ ಅವರು ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡಲಿದ್ದಾರೆ. ದುಬೈನಲ್ಲಿ ನವೆಂಬರ್‌ 24ರಂದು ಈ ಪಂದ್ಯವು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ನಡುವೆ ನಡೆಯಲಿದೆ. ‘ವೀಕ್ಷಕ ವಿವರಣೆ ನೀಡಲು ದುಬೈಗೆ ತೆರಳಲು ಉತ್ಸುಕನಾಗಿದ್ದೇನೆ‘ ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಹೇಳಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್ ಪಂದ್ಯವು ‘ಬೆಸ್ಟ್ ಆಫ್‌ 14‘ ಮಾದರಿಯದ್ದಾಗಿದೆ. ಟೈಬ್ರೇಕ್ ಕೂಡ ಇರಲಿದೆ. ‘ಫಿಡೆ ಚೆಸ್ಸೇಬಲ್ ಅಕಾಡೆಮಿಯಿಂದ ದುಬೈನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಆನಂದ್‌ ಅವರು ಉಪನ್ಯಾಸ ಕೂಡ ನೀಡಲಿದ್ದಾರೆ‘ ಎಂದು ವಿಶ್ವ ಚೆಸ್‌ ಫೆಡರೇಷನ್ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.