ರಾಜ್ಯ ಮಹಿಳಾ ಹಾಕಿ ತಂಡಗಳಿಗೆ ನಿಶಾ, ಲಿಖಿತ ನಾಯಕಿಯರು ಬೆಂಗಳೂರು: ನಿಶಾ ಪಿ.ಸಿ ಮತ್ತುಲಿಖಿತ ಎಸ್‌.‍ಪಿ ಅವರು ಹಾಕಿ ಇಂಡಿಯಾದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ರಾಜ್ಯದ ಸೀನಿಯರ್ ಮತ್ತು ಜೂನಿಯರ್ ತಂಗಳನ್ನು ಮುನ್ನಡೆಸುವರು. ಇದೇ 20ರಿಂದ 30ರ ವರೆಗೆ ಜೂನಿಯರ್ ಚಾಂಪಿಯನ್‌ಷಿಪ್‌ ಜಾರ್ಖಂಡ್‌ನಲ್ಲಿ ನಡೆಯಲಿದೆ. ಸೀನಿಯರ್ ಚಾಂಪಿಯನ್‌ಷಿಪ್ 21ರಿಂದ 31ರ ವರೆಗೆ ಉತ್ತರಪ್ರದೇಶದಲ್ಲಿ ನಡೆಯಲಿದೆ. ತಂಡಗಳು: ಸೀನಿಯರ್‌: ಚಿತ್ರಶ್ರೀ, ಶ್ರವ್ಯ ಜಿ.ಬಿ (ಗೋಲ್‌ಕೀಪರ್‌ಗಳು); ಕಾವ್ಯ ಕೆ.ಆರ್‌, ಸೌಮ್ಯಶ್ರೀ ಎನ್‌.ಆರ್‌, ಶಾಯಿನಾ ತಂಗಮ್ಮ, ಪೂಜಿತ್‌ ಬಿ.ಎಂ, ಯಶಿಕಾ ಎಂ.ಜಿ, ಅಂಜಲಿ ಎಚ್‌.ಆರ್‌, ಹೇಮಾ ಎ.ಎಚ್‌, ಸಂಧ್ಯಾ ಎಸ್‌.ಡಿ, ಪೂಜಾ ಎಂ.ಡಿ, ನಿಶಾ ಪಿ.ಸಿ (ನಾಯಕಿ), ಪವಿತ್ರಾ ಪಿ.ಎ, ವಿದ್ಯಾ ಕೆ.ಎಸ್‌, ಧನ್ಯಾ ಎಂ.ಜಿ, ದೀಪ್ತಿ ಕೆ.ಎ, ಯುಕ್ತಾ ಎಸ್‌, ನಿಹಾ ಎನ್‌. ಕೋಮಲ ಬಿ.ಎನ್‌ (ಮ್ಯಾನೇಜರ್‌), ಜಾನ್ ವರ್ಗೀಸ್ (ಕೋಚ್‌). ಜೂನಿಯರ್ ವಿಭಾಗ: ತೇಜಸ್ವಿನಿ ಡಿ.ಎನ್‌, ಧನುಶ್ರೀ ಎಚ್‌.ಜಿ (ಗೋಲ್‌ಕೀಪರ್‌ಗಳು), ನಿಶು ಎಸ್‌.ಎಸ್‌, ಪಾರ್ವತಿ ಕೆ.ಎ, ಶಿಲ್ಪಾ ಪಿ.ಟಿ, ಆದಿರ, ಜಾಹ್ನವಿ ಎಚ್‌.ಎಸ್‌, ಸಹನಾ ಸಿ.ಎಂ, ಪ್ರಗತಿ ಸಿ.ಕೆ, ಲಿಖಿತಾ ಎಸ್‌.ಪಿ, ಲೀಲಾವತಿ ಕೊಪ್ಪದ್‌, ಸಿಂಚನಾ ಎಚ್‌.ಪಿ, ಚಂದನಾ ಜೆ, ಅನ್ನಪೂರ್ಣ ಕೆ.ಎಸ್‌, ಕಾವ್ಯ ಜಿ, ಜೀವಿತಾ ಬಿ.ಜಿ‌, ಶಯ ಕಾವೇರಮ್ಮ, ದೇಚಮ್ಮ ಪಿ.ಜಿ, ರಾಖಿ ಪೂವಮ್ಮ (ಮ್ಯಾನೇಜರ್‌), ನಾಗಲಿಂಗಸ್ವಾಮಿ (ಕೋಚ್‌). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.