ಎರಡು ದಾಖಲೆ ಬರೆದ ಮೊಂಡಲ್ ಬೆಂಗಳೂರು: ಬಂಗಾಳದ ಸ್ವದೇಶ್ ಮೊಂಡಲ್ ಈಜುಕೊಳದಲ್ಲಿ ಮತ್ತೊಮ್ಮೆ ಮಿನುಗಿದರು. ರಾಷ್ಟ್ರೀಯ ಜೂನಿಯರ್‌ ಮತ್ತು ಸಬ್‌ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಎರಡು ದಾಖಲೆ ಬರೆದರು. ಇಲ್ಲಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಶುಕ್ರವಾರ ಮೊಂಡಲ್, ಬಾಲಕರ 400 ಮೀ. ಮೆಡ್ಲೆಯ ಒಂದನೇ ಗುಂಪಿನಲ್ಲಿ 4 ನಿಮಿಷ 34.15 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಇದರೊಂದಿಗೆ 2018ರಲ್ಲಿ ಅದ್ವೈತ್‌ ಪಾಜ್‌ ನಿರ್ಮಿಸಿದ್ದ ದಾಖಲೆಯನ್ನು (4:34.76) ಅಳಿಸಿಹಾಕಿದರು. ಅವರ ಇನ್ನೊಂದು ದಾಖಲೆ 200 ಮೀ. ಬ್ರೆಸ್ಟ್‌ಸ್ಟ್ರೋಕ್ನ ಒಂದನೇ ಗುಂಪಿನ ಸ್ಪರ್ಧೆಯಲ್ಲಿ ಮೂಡಿಬಂದಿತು. ಕರ್ನಾಟಕ ಹಷಿಕಾ ರಾಮಚಂದ್ರ ಕೂಡ ಬಾಲಕಿಯರ ಎರಡನೇ ಗುಂಪಿನ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ನೂತನ ದಾಖಲೆ ಬರೆದರು. ನಾಲ್ಕನೇ ದಿನದ ಫಲಿತಾಂಶಗಳು: ಬಾಲಕರು: 1500 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ಪವನ್ ಧನಂಜಯ್‌ (ಕರ್ನಾಟಕ)–1, ಕಾಲ: 17:12.05, ಕವೀನ್ ರಾಜ್‌ ವಿ. (ತಮಿಳುನಾಡು)–2, ಅಲಸ್ಟೇರ್ ಸ್ಯಾಮ್ಯುಯೆಲ್ ರೆಗೊ (ಕರ್ನಾಟಕ)–3. 400 ಮೀ. ಮೆಡ್ಲೆ: ಸ್ವದೇಶ್ ಮೊಂಡಲ್‌ (ಬಂಗಾಳ)–1, ಕಾಲ: 4:34.15 (ನೂತನ ದಾಖಲೆ), ಶೋನ್ ಗಂಗೂಲಿ (ಕರ್ನಾಟಕ)–2, ಕಲ್ಪ್ ಎಸ್‌. ಬೊಹ್ರಾ (ಕರ್ನಾಟಕ)–3. (4:34.76; ಈ ಹಿಂದಿನ ದಾಖಲೆಯನ್ನು 2018ರಲ್ಲಿ) ಅದ್ವೈತ್‌ ಪಾಜ್ ನಿರ್ಮಿಸಿದ್ದರು). 50 ಮೀ. ಬಟರ್‌ಫ್ಲೈ: ಮೂರನೇ ಗುಂಪು: ಅಕ್ಷಜ್ ಠಾಕೂರಿಯಾ (ಕರ್ನಾಟಕ)–1, ಕಾಲ: 30.56, ನಿತೀಶ್ ಎಂ.ಎಸ್‌. (ತಮಿಳುನಾಡು)–2, ಸೈರಾಜ್‌ ಲಾಸ್ಕರ್‌ (ಬಂಗಾಳ)–3. ನಾಲ್ಕನೇ ಗುಂಪು: ಶರಣ್ ಶ್ರೀಧರ್‌ (ಕರ್ನಾಟಕ)–1, ಕಾಲ: 32.86, ಲೈತೊಂಜಮ್‌ ಲಾಂಚೆಂಬಾ (ಮಣಿಪುರ)–2, ತೋಶಾಲ್ ಬಿರುದ್ (ಮಹಾರಾಷ್ಟ್ರ)–3. ಐದನೇ ಗುಂಪು: ಅಜೀತ್ ಯಾದವ್‌ (ಉತ್ತರಪ್ರದೇಶ)–1, ಕಾಲ: 34.20, ಅಬ್ದುಲ್ ಹಫೀಜ್ ಎಂ. (ತಮಿಳುನಾಡು)–2, ಮೋನಿಶ್‌ ನಾಯ್ಡು ಪಿ. (ತಮಿಳುನಾಡು)–3. 50 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ಸಂಭವ್ ಆರ್‌. (ಕರ್ನಾಟಕ)–1, ಕಾಲ: 23.57, ವೀರ್ ಖಾತ್ಕರ್‌ (ಹರಿಯಾಣ)–2, ಆರ್ಯನ್ ವರ್ಣೇಕರ್‌ (ಮಹಾರಾಷ್ಟ್ರ)–3. ಎರಡನೇ ಗುಂಪು: ಸರುಂಗಬಮ್ ಅಥೋಬಾ ಮೀಟಿ (ಮಣಿಪುರ)–1, ಕಾಲ: 25.99, ಹೀರ್ ಪಿತ್ರೊಡಾ (ಗುಜರಾತ್‌)–2, ಪ್ರಾಂಜಲ್ ಪಾಂಡೆ (ಮಧ್ಯಪ್ರದೇಶ)–3. 100 ಮೀ. ಬ್ಯಾಕ್‌ಸ್ಟ್ರೋಕ್: ಒಂದನೇ ಗುಂಪು: ಉತ್ಕರ್ಷ್‌ ಪಾಟೀಲ್‌ (ಕರ್ನಾಟಕ)–1, ಕಾಲ: 58.93, ನಿತಿಕ್ ಎಚ್‌. (ತಮಿಳುನಾಡು)–2, ಮಧುರ್ ಅಗರವಾಲ್‌ (ದೆಹಲಿ)–3. ಮೂರನೇ ಗುಂಪು: ಯಶಸ್ವಿ ನ್ಯೂನ್‌ (ತೆಲಂಗಾಣ)–1, ಕಾಲ: 1:15.37, ಒಜಸ್ ಸುಂದ್‌ (ಪುಣೆ)–2, ಅರ್ನವ್‌ ಕಾಡು (ಮಹಾರಾಷ್ಟ್ರ)–3. ನಾಲ್ಕನೇ ಗುಂಪು: ಇಶಾನ್ ಘೋಷ್‌ (ಬಂಗಾಳ)–1, ಕಾಲ: 1:16.11, ಶರಣ್ ಶ್ರೀಧರ್‌ (ಕರ್ನಾಟಕ)–2, ವಿಹಾನ್ ಚತುರ್ವೇದಿ (ಮಹಾರಾಷ್ಟ್ರ)–3. ಐದನೇ ಗುಂಪು: ಅರ್ಜುನ್ ರಾಘವನ್‌ (ಕರ್ನಾಟಕ)–1, ಕಾಲ: 1:29.89, ವರದ್‌ ಬೋರ್ (ಮಹಾರಾಷ್ಟ್ರ)–2, ಅದ್ವೈತ್ ದಳವಿ (ಕರ್ನಾಟಕ)–3. 100 ಮೀ. ಬಟರ್‌ಫ್ಲೈ: ಎರಡನೇ ಗುಂಪು: ಆದಿತ್ಯ ಥಾಪಾ (ಎಸ್‌ಎಸ್‌ಬಿಸಿ)–1, ಕಾಲ: 1:01.48, ಉತ್ಕರ್ಷ್‌ ಗೋರ್‌ (ಮಹಾರಾಷ್ಟ್ರ)–1, ದೇವಗಣೇಶ್ ಎನ್‌ (ಆಂಧ್ರಪ್ರದೇಶ)–3. 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಒಂದನೇ ಗುಂಪು: ಸ್ವದೇಶ್ ಮೊಂಡಲ್‌ (ಬಂಗಾಳ), ಕಾಲ: 2:22.29 (ನೂತನ ದಾಖಲೆ), ವಿದಿತ್ ಶಂಕರ್ (ಕರ್ನಾಟಕ)–2, ಭಾರ್ಗವ್ ಫುಕಾನ್‌ (ಅಸ್ಸಾಂ)–3 (2:22.44: ಈ ಹಿಂದಿನ ದಾಖಲೆಯನ್ನು 2017ರಲ್ಲಿ ತಮಿಳುನಾಡಿನ ಧನುಷ್ ಎಸ್‌. ನಿರ್ಮಿಸಿದ್ದರು). ಬಾಲಕಿಯರು: 1500 ಮೀ. ಫ್ರೀಸ್ಟೈಲ್‌: ಎರಡನೇ ಗುಂಪು: ಶಿರಿನ್‌ (ಕರ್ನಾಟಕ)–1, ಕಾಲ:18:45.01, ಅನನ್ಯಾ ರಾವತ್‌ (ದೆಹಲಿ)–2, ಅಂಬರ್‌ ಜೆ. ಸಿಂಗ್‌ (ಕರ್ನಾಟಕ)–3. 800 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ವೃತ್ತಿ ಅಗರವಾಲ್ (ತೆಲಂಗಾಣ)–1, ಕಾಲ: 9:22.16, ಅನ್ಯಾ ವಾಲ (ಮಹಾರಾಷ್ಟ್ರ)–2, ಆಶ್ಮಿತಾ ಚಂದ್ರ (ಕರ್ನಾಟಕ)–3. 400 ಮೀ. ಮೆಡ್ಲೆ: ಎರಡನೇ ಗುಂಪು: ಹಷಿಕಾ ರಾಮಚಂದ್ರ (ಕರ್ನಾಟಕ)–1, ಕಾಲ: 5:27.86, ರಿತಿಕಾ ಬಿ.ಎಂ. (ಕರ್ನಾಟಕ)–2, ಶ್ರೀ ನಿತ್ಯ ಸಾಗಿ (ತೆಲಂಗಾಣ)–3. 50 ಮೀ. ಬಟರ್‌ಫ್ಲೈ: ಮೂರನೇ ಗುಂಪು: ತನಿಶಾ ಗುಪ್ತಾ (ಕರ್ನಾಟಕ)–1, ಕಾಲ: 30.57, ಅದಿತಿ ಹೆಗ್ಡೆ (ಮಹಾರಾಷ್ಟ್ರ)–2, ಸಂಜನಾ ಪಿ.ವಿ. (ಕರ್ನಾಟಕ)–3. ನಾಲ್ಕನೇ ಗುಂಪು: ಅಲಿಸ್ಸಾ ಸ್ವೀಡಲ್ ರೆಗೊ (ಕರ್ನಾಟಕ)–1, ಕಾಲ: 34.16, ಜೋಯಾ ಜನ್ನತ್ (ಬಂಗಾಳ)–2, ಅನ್ವೇಷಾ ಖಾನಿಕರ್‌ (ಅಸ್ಸಾಂ)–3. ಐದನೇ ಗುಂಪು: ಲಾಸ್ಯ ಶ್ರೀ ಕೆ. (ಆಂಧ್ರಪ್ರದೇಶ)–1,ಕಾಲ:35.76, ಆಡ್ರಿಜಾ ರಾಣಿ ಚೇಟಿಯಾ (ಅಸ್ಸಾಂ)–2, ಅಶ್ವಿತಾ ವಿ. (ತಮಿಳುನಾಡು)–3. 50 ಮೀ. ಫ್ರೀಸ್ಟೈಲ್‌: ಒಂದನೇ ಗುಂಪು: ಜಾಹ್ನವಿ ಚೌಧರಿ (ಬಂಗಾಳ)–1, ಕಾಲ: 27.48, ಲೇತಿಶಾ ಮಂದಣ್ಣ (ಕರ್ನಾಟಕ)–2, ದಿಶಾ ಭಂಡಾರಿ (ಉತ್ತರಪ್ರದೇಶ)–3. ಎರಡನೇ ಗುಂಪು: ರಿಧಿಮಾ ವೀರೇಂದ್ರಕುಮಾರ್‌ (ಕರ್ನಾಟಕ)–1, ಕಾಲ: 27.88, ಶಾಲಿನಿ ದೀಕ್ಷಿತ್‌ (ಕರ್ನಾಟಕ)–2, ಜಾಹ್ನವಿ ಕಶ್ಯಪ್‌ (ಅಸ್ಸಾಂ)–3. 100 ಮೀ. ಬ್ಯಾಕ್‌ಸ್ಟ್ರೋಕ್‌: ಒಂದನೇ ಗುಂಪು: ನೀನಾ ವೆಂಕಟೇಶ್ (ಕರ್ನಾಟಕ)–1, ಕಾಲ: 1:06.68, ಸಂಜನಾ ಪ್ರಭುಗಾಂವಕರ್‌ (ಗೋವಾ)–2, ಪಲಕ್‌ ಧಾಮಿ (ಮಹಾರಾಷ್ಟ್ರ)–3. ಮೂರನೇ ಗುಂಪು: ಧಿನಿಧಿ ದೇಶಿಂಗು (ಕರ್ನಾಟಕ)–1 ಕಾಲ: 1:11.23, ಪ್ರಮಿತಿ ಜ್ಞಾನಶೇಖರನ್‌ (ತಮಿಳುನಾಡು)–2, ನೈಶಾ (ಕರ್ನಾಟಕ)–3. ನಾಲ್ಕನೇ ಗುಂಪು: ಅನಿಕಾ ದೆಬೋರಾ (ತೆಲಂಗಾಣ)–1, ಕಾಲ: 1:21.67, ಅನ್ವಿ ದೇಶ್ವಾಲ್‌ (ಮಹಾರಾಷ್ಟ್ರ)–2, ಸಾನ್ವಿ ದೇಶ್ವಾಲ್‌ (ಮಹಾರಾಷ್ಟ್ರ)–3. ಐದನೇ ಗುಂಪು: ಶ್ರೇಯಾ ಬಿನಿಲ್‌ (ಕೇರಳ)–1, ಕಾಲ: 1:26.11, ಅನಂಗ್‌ಶಾ ಶರ್ಮಾ (ಅಸ್ಸಾಂ)–2, ಔನಾ ಪವನ್ ಆಳ್ವಾ (ಕರ್ನಾಟಕ)–3. 100 ಮೀ. ಬಟರ್‌ಫ್ಲೈ: ಎರಡನೇ ಗುಂಪು: ಹಷಿಕಾ ರಾಮಚಂದ್ರ (ಕರ್ನಾಟಕ)–1, ಕಾಲ: 1:05.51 (ನೂತನ ದಾಖಲೆ), ರಿಷಿಕಾ ಯು. ಮಂಗಳೆ (ಕರ್ನಾಟಕ)–2, ಪ್ರತಿಷ್ಠಾ ದಾಂಗಿ (ಮಹಾರಾಷ್ಟ್ರ)–3 (1:05.98, ಈ ಹಿಂದಿನ ದಾಖಲೆಯನ್ನು ಕರ್ನಾಟಕದ ಮಯೂರಿ ಲಿಂಗರಾಜ್‌ 2016ರಲ್ಲಿ ನಿರ್ಮಿಸಿದ್ದರು). 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಒಂದನೇ ಗುಂಪು: ಸಾನ್ವಿ ರಾವ್‌ (ಕರ್ನಾಟಕ)–1, ಕಾಲ:2:47.70, ಎಸ್‌. ಲಾಕ್ಷ್ಯಾ (ಕರ್ನಾಟಕ)–2, ಯಶಸ್ವಿ ಕರಾತ್‌ (ಮಹಾರಾಷ್ಟ್ರ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.