ಕರ್ನಾಟಕದ 17ರ ಹರೆಯದ ಯುವ ಪ್ರತಿಭೆ ಸಂಭವ್ ಅತಿ ವೇಗದ ಈಜುಪಟು ಬೆಂಗಳೂರು: 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಷಿಪ್‌‌ನಲ್ಲಿ ಕರ್ನಾಟಕದ ಯುವ ಪ್ರತಿಭಾವಂತ ಈಜುಪಟು ಸಂಭವ್ ಆರ್. ಅತಿ ಕಡಿಮೆ ಅವಧಿಯಲ್ಲಿ ಗುರಿ ಕ್ರಮಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 17ರ ಹರೆಯದ ಸಂಭವ್, 50 ಮೀಟರ್ ಫ್ರೀಸ್ಟೈಲ್‌ ವಿಭಾಗದಲ್ಲಿ ಕೇವಲ 23.65 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ:ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಶ್ರೀಹರಿ ನಟರಾಜ್‌, ರಿಧಿಮಾ ಈ ಮೂಲಕ ಪಸಕ್ತ ಸಾಗುತ್ತಿರುವ ಕೂಟದ ಅತಿ ವೇಗದ ಈಜುಪಟು ಎನಿಸಿದ್ದಾರೆ. ಈ ವಿಭಾಗದಲ್ಲಿ ಮಹಾರಾಷ್ಟ್ರದ ಮಿಹಿರ್ ಆಮ್ರೆ (23.76) ಎರಡು ಹಾಗೂ ಹೀರ್ ಶಾ (23.93) ಮೂರನೇ ಸ್ಥಾನ ಗಿಟ್ಟಿಸಿದರು. ಇತ್ತೀಚಿಗೆ ನಡೆದ 47ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಸಂಭವ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.