ಶೂಟಿಂಗ್‌: ಫೈನಲ್ಸ್‌ಗೆ ಭಾರತದ ಭೋವನೀಶ್‌ ಕೈರೊ, ಈಜಿಪ್ಟ್‌: ಭಾರತದ ಶಾಟ್‌ಗನ್ ಶೂಟರ್‌ಗಳಾದ ಭೋವನೀಶ್ ಮೆಂಡಿರಟ್ಟಾ, ಪೃಥ್ವಿರಾಜ್‌ ತೊಂಡೈಮನ್‌ ಮತ್ತು ರಾಜೇಶ್ವರಿ ಕುಮಾರಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನ ಟ್ರ್ಯಾಪ್ ವಿಭಾಗದಲ್ಲಿ ಬುಧವಾರ ಫೈನಲ್ಸ್ ತಲುಪಿದರು. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಈಗಾಗಲೇ ಟಿಕೆಟ್‌ ಗಿಟ್ಟಿಸಿರುವ ಭೋವನೀಶ್‌ ನಾಲ್ಕು ಸುತ್ತಿನ ಸ್ಪರ್ಧೆಗಳ ಬಳಿಕ 94 ಪಾಯಿಂಟ್ಸ್ ಗಳಿಸಿದರೆ, ಪೃಥ್ವಿರಾಜ್‌ ಕೂಡ ಇಷ್ಟೇ ಸ್ಕೋರ್ ಕಲೆಹಾಕಿದರು. ಮಹಿಳೆಯರ ವಿಭಾಗದಲ್ಲಿ ರಾಜೇಶ್ವರಿ 88 ಪಾಯಿಂಟ್ಸ್ ಗಳಿಸಿದರು. ಐದನೇ ಮತ್ತು ಅಂತಿಮ ಸುತ್ತಿನ ಅರ್ಹತಾ ಸ್ಪರ್ಧೆಗಳು ಗುರುವಾರ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.