ಮಾಸ್ಟರ್ ಅಥ್ಲೀಟ್ ಯೋಗೇಂದ್ರಗೆ ಸನ್ಮಾನ ಬೆಂಗಳೂರು: ಅಂತರರಾಷ್ಟ್ರೀಯ ಮಾಸ್ಟರ್ ಅಥ್ಲೀಟ್ ಎಂ. ಯೋಗೇಂದ್ರ ಅವರನ್ನು ಕರ್ನಾಟಕ ಕಸ್ಟಮ್ಸ್ ಮತ್ತು ಜಿಎಸ್‌ಟಿ ಇಲಾಖೆಯ ಸಾಂಸ್ಕೃತಿಕ ಸೊಸೈಟಿ ಮತ್ತು ಕನ್ನಡ ಸಂಘವು ಗೌರವಿಸಿತು. ಯೋಗೇಂದ್ರ ಅವರ ಕ್ರೀಡಾ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಸ್ಟಮ್ಸ್‌ ವಿಭಾಗದ ಮುಖ್ಯ ಆಯುಕ್ತರು ಮತ್ತು ಜಿಎಸ್‌ಟಿ ಪ್ರಧಾನ ಮುಖ್ಯ ಆಯುಕ್ತರಾದ ರಂಜನಾ ಝಾ ಮತ್ತು ಆಯುಕ್ತ ಜಿ ನಾರಾಯಣಸ್ವಾಮಿ ಅವರು ಸನ್ಮಾನಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.