ಫಿಫಾ ವಿಶ್ವಕಪ್‌ಗೆ ಸ್ವಿಟ್ಜರ್‌ಲೆಂಡ್‌ ಪ್ರವೇಶ ಪ್ಯಾರಿಸ್ (ಎಎಫ್‌ಪಿ): ಸ್ವಿಟ್ಜರ್‌ಲೆಂಡ್ ಫುಟ್‌ಬಾಲ್ ತಂಡವು ಮುಂದಿನ ವರ್ಷ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ. ಸೋಮವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ವಿಸ್ ತಂಡವು 4–0 ಗೋಲುಗಳಿಂದ ಬಲ್ಗೇರಿಯಾ ವಿರುದ್ಧ ಜಯಿಸಿತು. ತಂಡದ ಒಕಾಫಿರ್ (48ನೇ ನಿಮಿಷ), ವಾರ್ಗಸ್ (57ನೇ ನಿ), ಇಟೆನ್ (72ನೇ ನಿ) ಮತ್ತು ಫ್ರೆಯುಲೆರ್ (90+1) ತಂಡದ ಗೆಲುವಿನ ರೂವಾರಿಗಳಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.