ಒಲಿಂಪಿಕ್ಸ್ ಶೂಟಿಂಗ್‌: ಏಷ್ಯಾಕ್ಕೆ ಕಾಯ್ದಿರಿಸಿದ ಸ್ಥಾನಗಳಲ್ಲಿ ಹೆಚ್ಚಳ ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಕ್ರೀಡೆಯ ಅರ್ಹತೆಗಾಗಿ ಏಷ್ಯಾದ ದೇಶಗಳಿಗೆ ಕಾಯ್ದಿರಿಸಿದ್ದ ಸ್ಥಾನಗಳನ್ನು ಅಂತರರಾಷ್ಟ್ರೀಯ ಶೂಟಿಂಗ್ ಫೆಡರೇಷನ್‌ (ಐಎಸ್‌ಎಸ್‌ಎಫ್‌) 38ರಿಂದ 48ಕ್ಕೆ ಹೆಚ್ಚಿಸಿದೆ. 2024ರ ಪ‍್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದು ಜಾರಿಗೆ ಬರುವ ನಿರೀಕ್ಷೆಯಿದೆ. 2022ರಿಂದಲೇ ಅರ್ಹತಾ ಸ್ಪರ್ಧೆಗಳು ಆರಂಭವಾಗಲಿವೆ. ಟೋಕಿಯೊ ಕೂಟದಲ್ಲಿ 38 ಸ್ಥಾನಗಳಿದ್ದವು. ‘ಏಷ್ಯಾಕ್ಕೆ ಕಾಯ್ದಿರಿಸಿದ ಸ್ಥಾನಗಳನ್ನು 38ರಿಂದ 48ಕ್ಕೆ ಹೆಚ್ಚಿಸಲಾಗಿದೆ ಎಂದು ದೃಢೀಕರಿಸುವ ಪತ್ರವನ್ ಐಎಸ್‌ಎಸ್‌ಎಫ್‌ನಿಂದ ಏಷ್ಯನ್ ಶೂಟಿಂಗ್ ಕಾನ್ಫೆಡರೇಷನ್‌ (ಎಎಸ್‌ಸಿ) ಸ್ವೀಕರಿಸಿದೆ‘ ಎಂದು ಎಎಸ್‌ಸಿಯು ಟ್ವಿಟರ್ ಮತ್ತು ಫೇಸ್‌ಬುಕ್‌ ಮಾಹಿತಿ ನೀಡಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆಯ 15 ಶೂಟರ್‌ಗಳು ಅರ್ಹತೆ ಗಿಟ್ಟಿಸಿದ್ದರು. ಆದರೆ ಒಂದು ಪದಕವೂ ದಕ್ಕಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.