ತನಿಷ್ಕಾ, ವೇದಾಂತ್‌ಗೆ ಪ್ರಶಸ್ತಿ: ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ಬೆಂಗಳೂರು: ವೇದಾಂತ್ ವಸಿಷ್ಠ ಮತ್ತು ತನಿಷ್ಕಾ ಕಪಿಲ್ ಕಾಲಭೈರವ್ ಅವರು ಡಾ. ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ವೇದಾಂತ್ ಅವರು 9-11, 11-6, 11-9, 6-11, 11-4ರಿಂದ ಪ್ರಥಮ್ ವಿ.ರಾವ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ಗಳಲ್ಲಿ ವೇದಾಂತ್‌ 11–3, 14–16, 11–4, 11–13, 11–4ರಿಂದ ರೆಯಾಂಶ್‌ ಜಲಾನ್ ಎದುರು, ಪ್ರಥಮ್‌ 11–9, 11–5, 12–10ರಿಂದ ಅಭಿನವ್ ಪ್ರಸನ್ನ ಎದುರು ಗೆದ್ದಿದ್ದರು. ಬಾಲಕಿಯರ ವಿಭಾಗದಲ್ಲಿ ತನಿಷ್ಕಾ 11–4, 11–4, 7–11, 11–2ರಿಂದ ರಾಶಿ ವಿ. ರಾವ್ ವಿರುದ್ಧ ಜಯಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ತನಿಷ್ಕಾ 12-10, 11-4, 11-6ರಿಂದ ಅನೆಟ್‌ ಮರಿಯಾನಾ ಎದುರು, ರಾಶಿ 11-4, 11-9, 13-15, 11-3ರಿಂದ ಯುಕ್ತಾ ಹರ್ಷಾ ವಿರುದ್ಧ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.