ಬ್ಯಾಸ್ಕೆಟ್‌ಬಾಲ್‌: ಬಿಸಿವೈಎಗೆ ಗೆಲುವು ಬೆಂಗಳೂರು: ಬಿಸಿವೈಎ ತಂಡದವರು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಆಶ್ರಯದ ರಾಜ್ಯ ಯೂತ್‌ (16 ವರ್ಷದೊಳಗಿನವರ) ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಬಿಸಿವೈಎ 57–51 ರಲ್ಲಿ ವಿಎನ್‌ಎಸ್‌ಸಿ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ 27–23 ರಿಂದ ಮುನ್ನಡೆಯಲ್ಲಿದ್ದ ವಿಜಯಿ ತಂಡದ ಪರ ವಿಸ್ಮಯ್‌ 8 ಪಾಯಿಂಟ್ಸ್ ತಂದಿತ್ತರು. ಬೆಂಗಳೂರು ವ್ಯಾಂಗಾರ್ಡ್ಸ್‌ 54–19 ರಲ್ಲಿ ಧಾರವಾಡದ ರೋವರ್ಸ್‌ ತಂಡವನ್ನು ಮಣಿಸಿದರೆ, ಮೈಸೂರಿನ ನ್ಯಾಷನಲ್ಸ್‌ ತಂಡ 80–45 ರಲ್ಲಿ ದಾವಣಗೆರೆ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಸೋಲಿಸಿತು. ಇತರ ಪಂದ್ಯಗಳಲ್ಲಿ ಬಾಗಲಕೋಟೆ ಬ್ಯಾಸ್ಕೆಟ್‌ಬಾಲ್‌ ತಂಡ 49–20 ರಲ್ಲಿ ಮೈಸೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ವಿರುದ್ಧ, ಧಾರವಾಡದ ಇನ್‌ಸ್ಪೈರ್‌ ಕ್ಲಬ್ 50–46 ರಲ್ಲಿ ಎಂಸಿಎಚ್ಎಸ್‌ ವಿರುದ್ಧ, ಕೋರಮಂಗಲ ಕ್ಲಬ್‌ 60–16 ರಲ್ಲಿ ದಾವಣಗೆರೆಯ ಮರ್ಚಂಟ್ಸ್‌ ಕ್ಲಬ್‌ ವಿರುದ್ಧ, ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ 50–15 ರಲ್ಲಿ ಯಂಗ್‌ ಬುಲ್ಸ್‌ ಕ್ಲಬ್‌ ವಿರುದ್ಧ, ಅಪ್ಪಯ್ಯ ಕ್ಲಬ್‌ 45–20 ರಲ್ಲಿ ಬಳ್ಳಾರಿಯ ವೈಸಿಬಿಸಿ ವಿರುದ್ಧವೂ ಗೆದ್ದವು. ಬಾಲಕಿಯರ ವಿಭಾಗದಲ್ಲಿ ಅಪ್ಪಯ್ಯ ಕ್ಲಬ್‌ 46–12 ರಲ್ಲಿ ವಿಎನ್ಎಸ್‌ಸಿ ವಿರುದ್ಧ ಗೆದ್ದರೆ, ಮೈಸೂರಿನ ಆಲ್‌ ಸ್ಟಾರ್‌ ಅಕಾಡೆಮಿ 49–14 ರಲ್ಲಿ ವಿಮಾನಪುರ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು. ಇತರ ಪಂದ್ಯಗಳಲ್ಲಿ ಪಿಪಿಸಿ 54–7 ರಲ್ಲಿ ರಾಜಕುಮಾರ್‌ ಕ್ಲಬ್‌ ವಿರುದ್ಧ, ಬೆಂಗಳೂರು ವ್ಯಾಂಗಾರ್ಡ್ಸ್‌ 54–8 ರಲ್ಲಿ ಎಚ್‌ಬಿಆರ್‌ ಕ್ಲಬ್‌ ವಿರುದ್ಧ, ರಾಜಮಹಲ್‌ ಕ್ಲಬ್‌ 45–9 ರಲ್ಲಿ ವೈಎಂಎಂಎ ವಿರುದ್ದ, ಎಂಸಿಎಚ್‌ಎಸ್‌ 54–7 ರಲ್ಲಿ ಸಿನ್ಸಿನಾಟಿಕ್ಸ್‌ ಕ್ಲಬ್ ವಿರುದ್ಧ ಜಯ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.