ಪ್ಯಾರಾ ಈಜು: ಏಷ್ಯನ್ ದಾಖಲೆ ಬರೆದ ನಿರಂಜನ್‌ ಮುಕುಂದನ್‌ ಬೆಂಗಳೂರು: ಭಾರತದ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್‌ ಅವರು 400 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ 12 ವರ್ಷಗಳ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ಜರ್ಮನ್‌ ಇಂಟರ್‌ನ್ಯಾಷನಲ್‌ ಕಪ್‌ ಚಾಂಪಿಯನ್‌ಷಿಪ್ ಎಸ್‌7 ವಿಭಾಗದ 400 ಮೀ, ಫ್ರೀಸ್ಟೈಲ್‌ನಲ್ಲಿ ಬೆಂಗಳೂರಿನ ನಿರಂಜನ್‌, 5 ನಿಮಿಷ 25.53 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ 2009ರಲ್ಲಿ ಜಪಾನ್‌ನ ಜುಂಪೆ ಕಿಮುರಾ (5:27.72) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.