ವಿಶ್ವ ಚೆಸ್‌: ಮೂರನೇ ಪಂದ್ಯವೂ ಡ್ರಾ ದುಬೈ: ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ರಷ್ಯಾದ ಇಯಾನ್‌ ನಿಪೋಮ್‌ನಿಶಿ ನಡುವೆ ಭಾನುವಾರ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ ಮೂರನೇ ಪಂದ್ಯ 41 ನಡೆಗಳ ನಂತರ ‘ಡ್ರಾ’ ಆಯಿತು. ಇಬ್ಬರೂ ತಲಾ 1.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಶುಕ್ರವಾರ ಗ್ರ್ಯಾಂಡ್‌ಮಾಸ್ಟರ್‌ಗಳ ನಡುವಣ ಮೊದಲ ಪಂದ್ಯ ಡ್ರಾ ಆಗಿತ್ತು. ಮರುದಿನ ನಡೆದ ಎರಡನೇ ಪಂದ್ಯದಲ್ಲಿ ಇಬ್ಬರೂ ಆಟಗಾರರು ಪಾಯಿಂಟ್‌ ಹಂಚಿಕೊಳ್ಳಲು ನಿರ್ಧರಿಸಿದ್ದರು. ಮೂರನೇ ಪಂದ್ಯ ಎರಡು ಗಂಟೆ 42 ನಿಮಿಷಗಳ ಕಾಲ ನಡೆದರೂ ನಿರ್ಣಾಯಕ ಫಲಿತಾಂಶ ಬರಲಿಲ್ಲ. 41ನೇ ನಡೆಯ ನಂತರ ಇಬ್ಬರೂ ಹಸ್ತಲಾಘವ ಮಾಡಿ ಸ್ಥಳದಿಂದ ನಿರ್ಗಮಿಸಿದರು. ರಷ್ಯಾದ ಆಟಗಾರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಬಿಳಿ ಕಾಯಿಗಳಲ್ಲಿ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.