ಬ್ಲಿಟ್ಜ್‌ ಚೆಸ್ ಟೂರ್ನಿ: ಸುಜಯ್‌ಗೆ ಚಾಂಪಿಯನ್‌ ಪಟ್ಟ ಬೆಂಗಳೂರು: ಪೂರ್ಣ ಅಂಕಗಳನ್ನು ಗಳಿಸಿದ ಬೆಂಗಳೂರಿನ ಸುಜಯ್ ಬಿ.ಎಂ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಬ್ಲಿಟ್ಜ್‌ ಚೆಸ್ ಟೂರ್ನಿಯ ಮುಕ್ತ ವಿಭಾಗದ ಚಾಂಪಿಯನ್ ಆದರು. ಐದರಲ್ಲಿ ಐದು ಪಾಯಿಂಟ್‌ಗಳನ್ನು ಅವರು ಗಳಿಸಿದರು.ನಾಲ್ಕು ಪಾಯಿಂಟ್ ಕಲೆ ಹಾಕಿದ ಸಂತೋಷ್ ಕುಮಾರ್ ಬಿ.ಎಸ್‌ ಎರಡನೇ ಸ್ಥಾನ ಗಳಿಸಿದರೆ ಅನುದೀಪ್ ಕೆ.ಎಸ್‌ ಕೂಡ ನಾಲ್ಕು ಪಾಯಿಂಟ್ ಗಳಿಸಿ ಮೂರನೇ ಸ್ಥಾನ ಗಳಿಸಿದರು. ಫಲಿತಾಂಶಗಳು: ಮುಕ್ತ ವಿಭಾಗ: ಸುಜಯ್‌ ಬಿ.ಎಂ–1, ಸಂತೋಷ್ ಕುಮಾರ್–2, ಅನುದೀಪ್–3; 16 ವರ್ಷದೊಳಗಿನವರು: ಚಿನ್ಮಯಿ–1, ಶಾನ್ ಪಿಂಟೊ–2, ಸಮರ್ಥ್‌ ದೇಸಾಯಿ–3; 10 ವರ್ಷದೊಳಗಿನವರ ವಿಭಾಗ: ಫಯಾಜ್ ಅಹಮ್ಮದ್–1, ಹಾರುಷ್‌–2, ಸುಜನ್ ಶೇಷಾದ್ರಿ–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.