ರಾಷ್ಟ್ರಮಟ್ಟದ ಜಾವೆಲಿನ್ ಎಸೆತ; ದಿಶಾಗೆ ಚಿನ್ನದ ಪದಕ ಭಾಲ್ಕಿ: ಪಟ್ಟಣದ ಶಾರದಾ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದಿಶಾ ಸಂತೋಷ ನೆಲವಾಡೆ ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ತಮಿಳುನಾಡಿನ ತಿರುಪ್ಪುರದ ಎಸ್‍ಡಿಎಟಿ ಕ್ರೀಡಾಂಗಣದಲ್ಲಿ ಸ್ಕೂಲ್ ಗೇಮ್ಸ್ ಮತ್ತು ಆಕ್ಟಿವಿಟಿ ಡೆವೆಲಪ್‍ಮೆಂಟ್ ಫೌಂಡೇಷನ್ ನ.26 ರಿಂದ 28ರವರೆಗೆ ನ್ಯಾಷನಲ್ ಚಾಂಪಿಯನ್‍ಶಿಪ್-2021 ಆಯೋಜಿಸಿತ್ತು. ಅಲ್ಲಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥ್ಲೆಟಿಕ್ಸ್ ವಿಭಾಗದ ಜಾವೆಲಿನ್ ಎಸೆತದಲ್ಲಿ ದಿಶಾ ಸಂತೋಷ ಅವರು ಸಾಧನೆ ಮಾಡಿದ್ದಾರೆ. ದಿಶಾಗೆ ಶಾಲೆಯ ಅಧ್ಯಕ್ಷ ವಸಂತ ಪಾಟೀಲ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.