ಕಿಕ್ ಬಾಕ್ಸಿಂಗ್‌: ಪ್ರಿಯಾಂಕಗೆ ಚಿನ್ನ ಬೆಂಗಳೂರು: ನಗರದ ಸಿಎಂಆರ್‌ಐಟಿಯ ವಿದ್ಯಾರ್ಥಿನಿ ಎಲ್.ಪ್ರಿಯಾಂಕ ರೆಡ್ಡಿ ಅವರು ಚೆನ್ನೈನಲ್ಲಿ ನಡೆದ ಫೈಟ್‌ ಲೀಗ್ ಚಾಂಪಿಯನ್‌ಷಿಪ್‌ನ ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನ ಮತ್ತು ಟೈಟಲ್‌ ಬೆಲ್ಟ್‌ ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಮುಯ್‌ಥಾಯ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕ, ಚೆನ್ನೈನ ಎದುರಾಳಿಯನ್ನು ಎಲ್ಲ ಸುತ್ತುಗಳಲ್ಲೂ ಮಣಿಸಿದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.