ಮರಿಯಾ, ಕಲವೈನನ್‌ಗೆ ಕಿರೀಟ ಬೆಂಗಳೂರು: ಮರಿಯಾ ರೋನಿ ಮತ್ತು ಎಂ. ಕಲೈವನನ್‌ ಅವರು ಡಾ. ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಮಲ್ಲೇಶ್ವರಂ ಸಂಸ್ಥೆಯ ಆವರಣದಲ್ಲಿ ನಡೆದ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮರಿಯಾ 11-4, 11-6, 11-6, 6-11, 6-11, 7-11, 11-6ರಿಂದ ಎ. ಸಂಯುಕ್ತಾ ಅವರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕಲೈವನನ್‌ 11–9, 11–4, 9–11, 15–13, 8–11, 8–11, 11–6ರಿಂದ ಪಿ.ವಿ.ಶ್ರೀಕಾಂತ್ ಕಶ್ಯಪ್‌ ಎದುರು ಗೆದ್ದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದೇಶ್ನಾ ಎಂ. ವಂಶಿಕಾ ಅವರಿಗೆ ಪ್ರಶಸ್ತಿ ಒಲಿಯಿತು. ಫೈನಲ್‌ ಪಂದ್ಯದಲ್ಲಿ ಅವರು 11–3, 11–6, 11–9, 11–9ರಿಂದ ಸಹನಾ ಎಚ್‌. ಮೂರ್ತಿ ಅವರನ್ನು ಸೋಲಿಸಿದರು. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಮ್ಯಕ್ ಕಶ್ಯಪ್‌ 9–11, 11–9, 11–4, 12–10, 11–8ರಿಂದ ಪಿ.ವಿ.ಶ್ರೀಕಾಂತ್ ಕಶ್ಯಪ್ ಎದುರು ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು. ನಾನ್‌ ಮೆಡಲ್ಸ್ ವಿಭಾಗದಲ್ಲಿ ಪ್ರಶಸ್ತಿಯೂ ಸಮ್ಯಕ್ ಅವರ ಮುಡಿಗೇರಿತು. ಫೈನಲ್ ಪಂದ್ಯದಲ್ಲಿ ಸಮ್ಯಕ್‌ 11, 7, 11–4, 11–6ರಿಂದ ವಿ.ಜಿ. ವಿಭಾಸ್‌ ವಿರುದ್ಧ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.