ಓಮೈಕ್ರಾನ್ ಹೊಮ್ಮಿದ ಬೋಟ್ಸ್‌ವಾನದಲ್ಲಿ ಸಿಲುಕಿದ ಭಾರತೀಯ ಬ್ಯಾಡ್ಮಿಂಟನ್‌ ಆಟಗಾರ ಇಂದೋರ್‌: ಮಧ್ಯಪ್ರದೇಶದ ಇಂದೋರ್‌ ಮೂಲದ ಬ್ಯಾಡ್ಮಿಂಟನ್ ಆಟಗಾರ ಪ್ರಿಯಾಂಶ್ ಖುಶ್ವಾನಿ ಓಮೈಕ್ರಾನ್‌ ಹೊಮ್ಮಿದ ದಕ್ಷಿಣ ಆಫ್ರಿಕಾ ರಾಷ್ಟ್ರ ಬೋಟ್ಸ್‌ವಾನದಲ್ಲಿ ಸಿಲುಕಿಕೊಂಡಿದ್ದಾರೆ. ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಹಲವು ರಾಷ್ಟ್ರಗಳು ಆಫ್ರಿಕಾ ರಾಷ್ಟ್ರಗಳಿಗೆ ವಿಮಾನ ಯಾನ ನಿರ್ಬಂಧಿಸಿವೆ. ಹೀಗಾಗಿ ನ. 28ರಂದು ಪಂದ್ಯಾವಳಿಗೆಂದು ಬೋಟ್ಸ್‌ವಾನಕ್ಕೆ ತೆರಳಿದ್ದ ಭಾರತೀಯ ಬ್ಯಾಡ್ಮಿಂಟನ್‌ ಆಟಗಾರ ಪ್ರಿಯಾಂಶ್‌ ಈಗ ವಿಮಾನವಿಲ್ಲದೇ ಅಲ್ಲಿಯೇ ಉಳಿಯುವಂತಾಗಿದೆ. ಪ್ರಿಯಾಂಶ್ ಅವರನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ಅವರ ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. , : # " & 28 ," (1/2) ../wTAP4dKuJv ಬೊಟ್ಸ್‌ವಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಅವರು ಪ್ರಿಯಾಂಶ್‌ಗೆ ಕೀನ್ಯಾ ವೀಸಾ ಪಡೆಯಲು ಸಹಾಯ ಮಾಡಿದ್ದಾರೆ ಎಂದು ಅವರ ತಂದೆ ದಿಲೀಪ್‌ ಖುಶ್ವಾನಿ ಹೇಳಿದ್ದಾರೆ. ಸದ್ಯ ಪ್ರಿಯಾಂಶ್‌ಗೆ ಪ್ರವಾಸಿ ವಿಸಾ ವ್ಯವಸ್ಥೆ ಮಾಡಲಾಗಿದ್ದು, ಡಿಸೆಂಬರ್ 10 ರಂದು ಕೀನ್ಯಾದಿಂದ ಭಾರತಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಅಷ್ಟರ ಒಳಗೇ ಕರೆತರಲು ಪ್ರಯತ್ನ ಮಾಡಬೇಕು ಎಂದು ದಿಲೀಪ್‌ ಮನವಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಯ ವರದಿ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.