ವಿಶ್ವ ಚೆಸ್‌: ಕಾರ್ಲ್‌ಸನ್‌ ಚಾಂಪಿಯನ್‌ ದುಬೈ: ನಾರ್ವೆಯ ಗ್ರ್ಯಾಂಡ್‌ಮಾಸ್ಟರ್‌ ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಶುಕ್ರವಾರ ಕಾರ್ಲ್‌ಸನ್‌ ರಷ್ಯಾದ ಇಯಾನ್‌ ಇಯಾನ್‌ ನಿಪೋಮ್‌ನಿಶಿ ಸವಾಲು ಮೀರಿದರು. 14 ಗೇಮ್‌ಗಳ ಪಂದ್ಯದ 11ನೇ ಗೇಮ್‌ನಲ್ಲಿ ಕಾರ್ಲ್‌ಸನ್ ಜಯ ಸಾಧಿಸಿದರು. ಇದು ಅವರಿಗೆ 4ನೇ ಜಯವಾಗಿತ್ತು. ಈ ಗೇಮ್‌ನಲ್ಲಿ ಅವರು ಕಪ್ಪು ಕಾಯಿಗಳೊಂದಿಗೆ ಆಡಿದ್ದರು. ಪಂದ್ಯದಲ್ಲಿ ಕಾರ್ಲಸನ್‌ 7.5 ಪಾಯಿಂಟ್ಸ್ ಗಳಿಸಿದರೆ ನಿಪೋಮ್‌ನಿಶಿ ಅವರಿಗೆ 3.5 ಪಾಯಿಂಟ್ಸ್ ಕಲೆಹಾ ಕಲಷ್ಟೇ ಸಾಧ್ಯವಾಯಿತು. 31 ವರ್ಷದ ನಾರ್ವೆ ಆಟಗಾರನಿಗೆ ಇದು ಸತತ ಐದನೇ ಪ್ರಶಸ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.