ಗಾಲ್ಫ್‌: ಆರ್ಯನ್ ರೂಪ ಆನಂದ್ ಚಾಂಪಿಯನ್ ಬೆಂಗಳೂರು: ಮೈಸೂರಿನ ಆರ್ಯನ್ ರೂಪ ಆನಂದ್ ಅವರು ಐಜಿಯು ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ನಡೆದ ಕೊನೆಯ ಸುತ್ತಿನಲ್ಲಿ 20 ವರ್ಷದ ಆರ್ಯನ್ ಪಂಜಾಬ್‌ನ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿದರು. ಈ ಮೂಲಕ ಪ್ರಶಸ್ತಿ ಉಳಿಸಿಕೊಂಡರು. 2019ರಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲೂ ಅವರು ಚಾಂಪಿಯನ್ ಆಗಿದ್ದರು. ಆರ್ಯನ್‌ ಈ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಅಪ‍ರೂಪದ ಸಾಧನೆಯನ್ನೂ ಮಾಡಿದರು. ಬೆಂಗಳೂರಿನ ಚಿಕ್ಕರಂಗಪ್ಪ ಈ ಸಾಧನೆ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.