ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಭಾರತದ ಕಿದಂಬಿ ಶ್ರೀಕಾಂತ್‌ಗೆ ಜಯ ಹುವೆಲ್ವಾ, ಸ್ಪೇನ್: ಭಾರತದ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾ ಹಣಿಯಲ್ಲಿ ಅವರು 21-12, 21-16ರಿಂದ ಸ್ಪೇನ್‌ನ ಪ್ಯಾಬ್ಲೊ ಅಬಿ ಯನ್ ಅವರನ್ನು ಮಣಿಸಿದರು. ಕೇವಲ 36 ನಿಮಿಷಗಳಲ್ಲಿ ಪಂದ್ಯ ಮುಗಿಯಿತು. ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ಮನು ಅತ್ರಿ– ಬಿ.ಸುಮೀತ್ ರೆಡ್ಡಿ 16-21, 15-21ರಿಂದ ಡೆನ್ಮಾರ್ಕ್‌ನ ಜೋಯಲ್ ಎಲ್ಪ್‌ ಮತ್ತು ರಾಸ್ಮಸ್‌ ಜೇರ್ ಎದುರು ನಿರಾಸೆ ಅನುಭವಿಸಿದರು. ಇದಕ್ಕೂ ಮೊದಲು ಪೂಜಾ ದಂಡು ಮತ್ತು ಸಂಜನಾ ಸಂತೋಷ್ ಅವರು ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ 12-21ರಿಂದ ನೆದರ್ಲೆಂಡ್ಸ್‌ನ ಅಲಿಸ್ಸಾ ತಿರ್ತೊಸೆಂಟೊನೊ– ಇಮ್ಕೆ ವ್ಯಾನ್‌ ಡರ್‌ ಆರ್‌ ಎದುರು ಹಿನ್ನಡೆಯಲ್ಲಿದ್ದಾಗ ಪಂದ್ಯದಿಂದ ಹಿಂದೆ ಸರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.