ರಾಷ್ಟ್ರೀಯ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್: ಕರ್ನಾಟಕ ತಂಡಕ್ಕೆ ಪೂವಣ್ಣ ನಾಯಕ ಬೆಂಗಳೂರು: ರಾಷ್ಟ್ರೀಯ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಪುರುಷರ ತಂಡವನ್ನು ಪ್ರಕಟಿಸಲಾಗಿದೆ. ಸಿ.ಬಿ. ಪೂವಣ್ಣ ಅವರು ರಾಜ್ಯ ತಂಡದ ಸಾರಥ್ಯ ವಹಿಸಿದ್ದಾರೆ. ತಮಿಳುನಾಡಿನ ಕೋವಿಲಪಟ್ಟಿಯಲ್ಲಿ ಡಿಸೆಂಬರ್‌ 16ರಿಂದ 25ರವರೆಗೆ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ ನಿಗದಿಯಾಗಿದೆ. ಕರ್ನಾಟಕ ತಂಡವು ಚಂಡೀಗಡ, ಆಂಧ್ರ ಮತ್ತು ಮಿಜೋರಾಂ ತಂಡಗಳಿರುವ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ತಂಡ: ಸಿ.ಬಿ. ಪೂವಣ್ಣ (ನಾಯಕ), ಮೋಹಿತ್ ಎಚ್.ಎಸ್. (ಗೋಲ್ ಕೀಪರ್),ದೀಕ್ಷಿತ್ ಎ.ಎಚ್,ಮಜ್ಜಿ ಗಣೇಶ್,ಅರ್ಜುನ್ ಬಿ, ಆಶಿಕ್ ಎನ್.ಆರ್,ವಿಶ್ವಾಸ್ ಜಿ,ಪ್ರಜ್ವಲ್ ಬಿಜ ವಾಡ.ದೇಶ್ ಪೂವಯ್ಯ ಎ.ಎ,ಭರತ್ ಎಂ.ಕೆ,ಬಿಪಿನ್ ಬಿ.ಆರ್,ರಾಹುಲ್ ಸಿ.ಜೆ,ಭವಿನ್ ಕುಶಾಲಪ್ಪ ಕೆ.ಆರ್,ಚಿರಣ್ ಮೇದಪ್ಪ,ಲಕ್ಕಲ ಹಿತೇಶ್ ರಾವ್,ನಿಕಿಲ್ ಜೋಸೆಫ್ ಕೆ.ಜೆ,ನೆಹಲ್ ತಮ್ಮಯ್ಯ ಎಂ.ಡಿ,ಶಾನ್ ಮೊನ್ನಪ್ಪ ಎಂ.ಎ (ಗೋಲ್ ಕೀಪರ್). ಮ್ಯಾನೇಜರ್‌:ನಾಗಲಿಂಗ ಸ್ವಾಮಿ,ಕಂಡಿಷನರ್: ಅವಿನಾಶ್ ಕೆ.ಸಿ, ಕೋಚ್‌:ತನು ನಂಜಪ್ಪ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.