ವಿಶ್ವ ಬ್ಯಾಡ್ಮಿಂಟನ್‌: ಪ್ರಣಯ್‌ ಜಯಭೇರಿ ಹುವೆಲ್ವಾ, ಸ್ಪೇನ್: ಹಿನ್ನಡೆಯಿಂದ ಪುಟಿದೆದ್ದ ಭಾರತದ ಎಚ್‌.ಎಸ್‌.ಪ್ರಣಯ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಜಯದ ಆರಂಭ ಮಾಡಿದರು. ಸೋಮವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್‌ 13-21, 21-18, 21-19ರಿಂದ ಹಾಂಗ್‌ಕಾಂಗ್‌ನ ಎನ್‌ಜಿ ಕಾ ಲಾಂಗ್ ಎದುರು ಗೆದ್ದರು. ವೀರೋಚಿತ ಹೋರಾಟ ನೀಡಿದ ಬಿ.ಸಾಯಿ ಪ್ರಣೀತ್ ಅವರು 21–17, 7–21, 18–21ರಿಂದ ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಜೊ ಎದುರು ನಿರಾಸೆ ಅನುಭವಿಸಿದರು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ವೆಂಕಟ್‌ ಗೌರವ್ ಪ್ರಸಾದ್‌ ಮತ್ತು ಜೂಹಿ ದೇವಾಂಗನ್‌8-21 4-21ರಿಂದ ಡೆನ್ಮಾರ್ಕ್‌ನ ಮಥಾಯಿಸ್‌ ತಿರಿ –ಮಯಿ ಸುರ್ರೊ ಎದುರು, ಉತ್ಕರ್ಷ್‌ ಅರೋರಾ– ಕರೀಷ್ಮಾ ವಾಡಕರ್‌20-22, 16-21ರಿಂದ ಜರ್ಮನಿಯ ಪ್ಯಾಟ್ರಿಕ್‌ ಶಿಯೆಲ್– ಫ್ರಾನ್ಸಿಸ್ಕಾ ವೊಲ್ಕಮನ್‌ ಎದುರು ಸೋತರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್ ಜಾರ್ಜ್‌–ಸನ್ಯಾಮ್ ಶುಕ್ಲಾ ಕೂಡ ನಿರಾಸೆ ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.