ಈಜು: ಶ್ರೀಹರಿ ರಾಷ್ಟ್ರೀಯ ದಾಖಲೆ ಅಬುಧಾಬಿ: ಭಾರತದ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ ಮತ್ತು ಕುಶಾಗ್ರ ರಾವತ್ ಅವರು ಫಿನಾ ಶಾರ್ಟ್ ಕೋರ್ಸ್ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಗುರುವಾರ ನಡೆದ ಪುರುಷರ 200 ಮೀಟರ್ಸ್ ಬಟರ್‌ಫ್ಲೈ ಸ್ಪರ್ಧೆಯ ಹೀಟ್ಸ್‌ನಲ್ಲಿ ಸಜನ್ 1 ನಿಮಿಷ 52.10ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಒಟ್ಟಾರೆ 10ನೇ ಸ್ಥಾನಕ್ಕೆ ಕುಸಿದ ಅವರು ಫೈನಲ್ ಪ್ರವೇಶಿಸಲು ವಿಫಲರಾದರು. 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ 52.81 ಸೆಕೆಂಡುಗಳ ಸಾಧನೆಯೊಂದಿಗೆ ಹೀಟ್ಸ್‌ನಲ್ಲಿ 28ನೇ ಸ್ಥಾನ ಗಳಿಸಿದರು. ಕುಶಾಗ್ರ ರಾವತ್ 400 ಮೀ ಫ್ರೀಸ್ಟೈಲ್‌ನಲ್ಲಿ 3 ಮೀ 49.04 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಿಧಿಮಾ ವೀರೇಂದ್ರ ಕುಮಾರ್ ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ 1ನಿ 03.29 ಸೆಕೆಂಡುಗಳಲ್ಲಿ ಗುರಿ ತಲುಪಿ 34ನೇ ಸ್ಥಾನಕ್ಕೆ ಕುಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.