ಫುಟ್‌ಬಾಲ್‌: ಎಎಸ್‌ಸಿ ಸೆಂಟರ್‌ಗೆ ಜಯ ಬೆಂಗಳೂರು: ಎಲಾಂಗ್‌ಬಮ್‌ ಟಂಡನ್ ಮಟೆಯ್‌ ಗಳಿಸಿದ ಗೋಲಿನ ನೆರವಿನಿಂದ ಎಎಸ್‌ಸಿ ಆ್ಯಂಡ್‌ ಸೆಂಟರ್ ಎಫ್‌ಸಿ ತಂಡವು ಜಯ ಗಳಿಸಿತು. ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿಎಎಸ್‌ಸಿ ಆ್ಯಂಡ್‌ ಸೆಂಟರ್ 1–0ಯಿಂದ ಜವಾಹರ್ ಯೂನಿಯನ್ ತಂಡವನ್ನು ಸೋಲಿಸಿತು.ಎಲಾಂಗ್‌ಬಮ್‌ ಆರನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಮತ್ತೊಂದು ಹಣಾಹಣಿಯಲ್ಲಿ ಎಂಇಜಿ ಆ್ಯಂಡ್ ಸೆಂಟರ್ ಎಫ್‌ಸಿ ತಂಡವು 1–1ರಿಂದ ಬೆಂಗಳೂರು ಈಗಲ್ಸ್ ಎಫ್‌ಸಿಯೊಡನೆ ಡ್ರಾ ಸಾಧಿಸಿತು. ಬುಧವಾರದ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್– ಸ್ಟೂಡೆಂಟ್ಸ್ ಯೂನಿಯನ್ ಮುಖಾಮುಖಿಯಾಗಲಿವೆ. ಕೆಎಸ್‌ಎಫ್‌ಎ ಮಹಿಳಾ ಲೀಗ್‌ನಲ್ಲಿ ಸ್ಲ್ಯಾಮ್‌ಜರ್ಸ್ ಬೆಳಗಾವಿ ಮತ್ತು ಬೆಂಗಳೂರು ಸಾಕರ್ ಗೆಲಾಕ್ಸಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.