ಬೆಂಗಳೂರು ನಗರ ವಿವಿ ಚಾಂಪಿಯನ್ ಬೆಂಗಳೂರು: ಅಂತಿಮ ಪಂದ್ಯದಲ್ಲೂ ಅಮೋಘ ಆಟ ಮುಂದುವರಿಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯ ತಂಡ ಶುಕ್ರವಾರ ಕೊನೆಗೊಂಡ ದಕ್ಷಿಣ ವಲಯ ಅಂತರ ವಿವಿ ಹಾಕಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು. ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ನಗರ ವಿವಿ 3–1ರಲ್ಲಿ ಬೆಂಗಳೂರು ವಿವಿಯನ್ನು ಸೋಲಿಸಿತು. ಈ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಆತಿಥೇಯ ತಂಡ ರನ್ನರ್ ಅಪ್‌ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡಿತು. ತಿರುನಲ್ವೇಲಿಯ ಮನೋನ್ಮಣಿಯಂ ಸುಂದರರ್ ವಿವಿ ಮೂರನೇ ಸ್ಥಾನ ಮತ್ತು ಚೆನ್ನೈನ ಎಸ್‌.ಆರ್‌.ಎಂ ವಿವಿ ನಾಲ್ಕನೇ ಸ್ಥಾನ ಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.